Site icon PowerTV

ಬಿಜೆಪಿ ಅಚ್ಚರಿ ಆಯ್ಕೆ : ಮೋಹನ್ ಯಾದವ್ ಮಧ್ಯಪ್ರದೇಶ ಸಿಎಂ

ಬೆಂಗಳೂರು : ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಹೆಸರನ್ನು ರಾಜ್ಯ ಬಿಜೆಪಿ ಘೋಷಿಸಿದೆ.

ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಮನೆಯಲ್ಲಿ ಸಂಜೆ 4 ಗಂಟೆಗೆ ಬಿಜೆಪಿ ನಾಯಕರು ಹಾಗೂ ಕೇಂದ್ರ ನಾಯಕತ್ವದ ಮೂವರು ವೀಕ್ಷಕರು ಸಭೆ ನಡೆಸಿದರು.

ಚೌಹಾಣ್ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ರಾಜಕೀಯ ವಲಯದಲ್ಲಿ ಸುದ್ದಿ ಹಬ್ಬಿತ್ತು. ಆದರೆ, ಅಚ್ಚರಿಯ ರೀತಿಯಲ್ಲಿ ಮೋಹನ್ ಯಾದವ್ ಹೆಸರನ್ನು ಘೋಷಿಸಲಾಗಿದೆ. ಮೋಹನ್ ಯಾದವ್ ಉಜ್ಜಯಿನಿ ದಕ್ಷಿಣದ ಶಾಸಕರಾಗಿದ್ದಾರೆ.

Exit mobile version