Site icon PowerTV

ಅಷ್ಟಕ್ಕೂ ನಾನೇನು ತಪ್ಪು ಮಾಡಿದ್ದೀನಪ್ಪಾ? : ಜಮೀರ್ ಅಹ್ಮದ್

ಬೆಳಗಾವಿ : ಅಧಿವೇಶನದ ಎರಡನೇ ವಾರ ಇದ್ದಕ್ಕಿದ್ದಂತೆ ನನ್ನ ವಿಚಾರ ಪ್ರಸ್ತಾಪ ಮಾಡುವ ಅಗತ್ಯವೇನು? ಅಷ್ಟಕ್ಕೂ ನಾನೇನು ತಪ್ಪು ಮಾಡಿದ್ದೀನಪ್ಪಾ? ಎಂದು ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಗರಂ ಆದರು.

ಬೆಳಗಾವಿಯ ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್​ನಲ್ಲಿ ಸಭೆ ಇತ್ತು. ಸಭೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾನ ಅಧಿಕಾರ ಕೊಡಲ್ಲ ಅಂತ ಅಲ್ಲಿನವರು ಹೇಳಿದ್ರು. ನಿಮಗೆ ತಪ್ಪು ಭಾವನೆ ಇದೆ ಅಂತ ಹೇಳಿದ್ದೆ ಅಷ್ಟೇ ಎಂದು ಹೇಳಿದರು.

ನನ್ನ ಮಂತ್ರಿ ಮಾಡಿದ್ದಾರೆ. ರಹೀಂ ಖಾನ್ ಅವರನ್ನು ಮಂತ್ರಿ ಮಾಡಿದ್ದಾರೆ. ನಜೀರ್ ಅಹ್ಮದ್ ಖಾದರ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಮಾಡಿದ್ದಾರೆ. ಕರ್ನಾಟಕದಲ್ಲಿ ಯಾವೋನೂ ಸ್ಪೀಕರ್ ಮಾಡಿಲ್ಲ. ಕರ್ನಾಟಕದಲ್ಲಿ ಯು.ಟಿ. ಖಾದರ್ ಅವರನ್ನು ಸ್ಪೀಕರ್ ಮಾಡಿದ್ದಾರೆ. ಯಾರಿದ್ದರೂ ಸ್ಪೀಕರ್ ಪೀಠಕ್ಕೆ ನಮಸ್ಕಾರ ಮಾಡಬೇಕು ತಾನೇ. ಕಾಂಗ್ರೆಸ್ ಪಕ್ಷ ಕೊಟ್ಟಿದೆ ಅಂತ ಘಂಟಾಘೋಷವಾಗಿ ಹೇಳುತ್ತೇನೆ ಎಂದು ಬಿಜೆಪಿಗರ ವಿರುದ್ಧ ಕಿಡಿಕಾರಿದರು.

ನನ್ನ ಹೇಳಿಕೆಗೆ ನಾನು ಬದ್ಧ, ನಾನೇನೂ ತಪ್ಪು ಹೇಳಿಲ್ಲ

ಯು.ಟಿ. ಖಾದರ್ ಅವರನ್ನು ಸ್ಪೀಕರ್ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಇಸ್ಲಾಂ ಅವರಿಗೆ ಕೊಟ್ಟಿದೆ ಅಂತಾ ಹೇಳಿದ್ದೆ. ನಾನು ಹಿಂದೂಗಳಿಗೆ ನಮಸ್ಕಾರ ಮಾಡಿ ಅಂತ ಹೇಳಿದ್ದೀನಾ? ಬಿಜೆಪಿಯವರೂ ಕೂಡ ಆ ಪೀಠಕ್ಕೆ ಗೌರವ ಕೊಡಬೇಕು. ಬಿಜೆಪಿಯವರಿಗೆ ಇಶ್ಯೂ ಇಲ್ಲ ಅದಕ್ಕೆ ಮಾಡ್ತಿದ್ದಾರೆ. ಚರ್ಚೆ ಮಾಡೋಕೆ ನಾವು ಸಿದ್ದ ಇದ್ದೇವೆ. ನಾನೇನು ತಪ್ಪು ಮಾಡಿದ್ದೀನಿ? ಅವರಲ್ಲೇ ಹೊಂದಾಣಿಕೆ ಇಲ್ಲ. ಹೀಗಾಗಿ, ಹೈಕಮಾಂಡ್ ಸೂಚನೆ ಕೊಟ್ಟಿದೆ, ಗಲಾಟೆ ಮಾಡ್ತಿದ್ದಾರೆ. ನನ್ನ ಹೇಳಿಕೆಗೆ ನಾನು ಬದ್ಧ, ನಾನೇನೂ ತಪ್ಪು ಹೇಳಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಸಮರ್ಥಿಸಿಕೊಂಡರು.

Exit mobile version