Site icon PowerTV

ಅನೈತಿಕ ಸಂಬಂಧ ನಿರಾಕರಿಸಿದ ಮಹಿಳೆ : ಚಾಕುವಿನಿಂದ ಇರಿದು ಕೊಲೆಗೈದ ಪಾಪಿ

ಬೆಂಗಳೂರು: ಅನೈತಿಕ (ವಿವಾಹೇತರ ಸಂಬಂಧ) ಸಂಬಂಧ ನಿರಾಕರಿಸಿದ ಕಾರಣಕ್ಕೆ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಬೆಂಗಳೂರಿನ ಜೆ.ಜೆ ನಗರದ ನಾಲ್ಕನೇ ಕ್ರಾಸ್‌ನಲ್ಲಿ ನಡೆದಿದೆ.

ಪರ್ವಿನ್ ತಾಜ್ ಕೊಲೆಯಾದ ಮಹಿಳೆ. ಮಹಮ್ಮದ್ ಜುನೈದ್ ಎಂಬಾತ ಕೊಲೆ ಮಾಡಿರುವ ಆರೋಪಿ. ಜುನೈದ್ ಹಾಗೂ ಮೃತ ಮಹಿಳೆ ಇಬ್ಬರೂ ಸಂಬಂಧಿಗಳು ಎಂದು ತಿಳಿದುಬಂದಿದೆ.

ಸಣ್ಣಪುಟ್ಟ ವಿಚಾರಕ್ಕೂ ಜಗಳ ಆಗುತ್ತಿದ್ದರಿಂದ ಕೆಲ ತಿಂಗಳುಗಳಿಂದ ಪತ್ನಿಯಿಂದ ಜುನೈದ್ ದೂರವಾಗಿದ್ದನು. ಪತ್ನಿ ದೂರವಾದ ಬಳಿಕ ಮಾನಸಿಕವಾಗಿ ನೊಂದಿದ್ದ ಆರೋಪಿ ಜುನೈದ್​ಗೆ ಸಂಬಂಧಿ ಪರ್ವಿನ್ ತಾಜ್ ಹತ್ತಿರವಾಗಿದ್ದಳು. ಆದರೆ, ಏನಾಯ್ತೋ ಅವಳು ಕೂಡ ಜುನೈದ್‌ನನ್ನ ಅವೈಡ್ ಮಾಡುತ್ತಿದ್ದಳು. ಈ ವಿಚಾರಕ್ಕೆ ಪರ್ವಿನ್ ತಾಜ್ ಜೊತೆಗೂ ಜಗಳ ಮಾಡಿಕೊಂಡಿದ್ದ ಜುನೈದ್, ಪರ್ವಿನ್ ತಾಜ್ ಮನೆಯಲ್ಲಿ ಒಬ್ಬಳೇ ಇರುವುದನ್ನ ನೋಡಿಕೊಂಡು ಚಾಕುವಿನೊಂದಿಗೆ ಹೋಗಿದ್ದ.

ಆರೋಪಿಗಾಗಿ ಪೊಲೀಸರು ಹುಡುಕಾಟ

ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಚಾಕುವಿನಿಂದ ಇರಿದು ಕೊಂದಿದ್ದಾನೆ. ಬಳಿಕ ಅಲ್ಲಿಂದ ತಲೆಮರೆಸಿಕೊಂಡಿದ್ದ. ಪರ್ವಿನ್ ತಾಜ್ ಮೃತ ದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಜೆ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಜುನೈದ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Exit mobile version