Site icon PowerTV

ಕಾರು ಪಲ್ಟಿ : ನಾಲ್ವರ ದುರ್ಮರಣ

ಚಿಕ್ಕಬಳ್ಳಾಪುರ: ಅತಿವೇಗದಿಂದ ಚಾಲಕನ ನಿಯಂತ್ರಣ ತಪ್ಪಿ ಅಣಕನೂರಿನ ಅಮಾನಿ‌ ಗೋಪಾಲಕೃಷ್ಣ ಕೆರೆಗೆ ಕಾರು ಉರುಳಿ ನಾಲ್ವರ ದುರ್ಮರಣ ಹೊಂದಿರುವ ಘಟನೆ ನಡೆದಿದೆ. 

ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಚಿಕ್ಕಬಳ್ಳಾಪುರ ಬೈಪಾಸ್​ಗೆ ಹೊಂದಿಕೊಂಡಿರುವ ಅಮಾನಿ ಗೋಪಾಲಕೃಷ್ಣ ಕೆರೆಯ ನೀರಿಗೆ ಕಾರು ಉರುಳಿಬಿದ್ದು ನಾಲ್ಕು ಜನ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಂತಾಮಣಿ ಪಟ್ಟಣದ ನೆಕ್ಕೂಂದಿಪೇಟೆ ನಿವಾಸಿ ಟ್ಯಾಗೂರು(21), ಚಿಕ್ಕಬಳ್ಳಾಪುರದ ನಿವಾಸಿಗಳಾದ ಪವನ್(22), ಆರ್ಯನ್(22), ಚಿಕ್ಕಬಳ್ಳಾಪುರದ ಹೆಚ್​.ಎಸ್​.ಗಾರ್ಡನ್​ ನಿವಾಸಿ ವಸಂತ್(21) ಮೃತ ದುರ್ದೈವಿಗಳು.

ಘಟನೆಯ ವಿವರ

KA 03 MT 0761 ಸಂಖ್ಯೆಯ ಕಾರು ಬೆಂಗಳೂರಿನಿಂದ ಬಾಗೇಪಲ್ಲಿ ಕಡೆಗೆ ಹೋಗ್ತಿದ್ದಾಗ ಘಟನೆ ನಡೆದಿದ್ದು ನಾಲ್ವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಸ್ಥಳೀಯ ಅಗ್ನಿಶಾಮಕದಳ ಹಾಗೂ ಸಂಚಾರಿ ಠಾಣೆ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಯುವಕರನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ. ಹರಸಾಹಸ ಪಟ್ಟು ಕಾರನ್ನು ಕೆರೆಯಿಂದ ಮೇಲೆ ಎತ್ತುವ ಕೆಲಸ ಮಾಡಿದ್ದಾರೆ. ಆದರೂ ಯುವಕರು ಬದುಕಿ ಬರಲಿಲ್ಲ.

 

 

Exit mobile version