Site icon PowerTV

ರಕ್ಕಸ ಅಲೆಗೆ ಎರಡು ಬಲಿ : ಸೋಮೇಶ್ವರ ಕಡಲಿಗಿಳಿದ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

ಮಂಗಳೂರು : ಸೋಮನಾಥ ದೇವಾಲಯದಲ್ಲಿ ಮಧ್ಯಾಹ್ನ ಊಟ (ಪ್ರಸಾದ) ಮಾಡಿ ಸಮುದ್ರದಲ್ಲಿ ನೀರಾಟ(ಈಜಲು)ಕ್ಕಿಳಿದಿದ್ದ ಆರು ಮಂದಿ ಪಿಯುಸಿ ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರುಪಾಲಾಗಿದ್ದಾರೆ.

ಮಂಗಳೂರು ಹೊರವಲಯದ ಉಳ್ಳಾಲದ ಸೋಮೇಶ್ವರ ಬೀಚ್​ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಂಜೇಶ್ವರ ಕುಂಜತ್ತೂರಿನ ಯಶ್ವಿತ್(17) ಹಾಗೂ ಯುವರಾಜ್ (17) ನೀರುಪಾಲಾದ ವಿದ್ಯಾರ್ಥಿಗಳು.

ಮೃತರು ಸೋಮೇಶ್ವರ ಪರಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ ಮೃತ ಯಶ್ವಿತ್ ಹಾಗೂ ಯುವರಾಜ್ ಸೇರಿದಂತೆ ಒಟ್ಟು ಆರು ಮಂದಿ ವಿದ್ಯಾರ್ಥಿಗಳು ಸೋಮನಾಥ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಅನ್ನ ಪ್ರಸಾಧ ಸ್ವೀಕರಿಸಿದ ಬಳಿಕ ಸಮೀಪದ ಕಡಲ ಕಿನಾರೆಯಲ್ಲಿ ನೀರಾಟ(ಈಜಲು)ಕ್ಕೆ ತೆರಳಿದ್ದರು. ಈ ವೇಳೆ ಕಡಲಿನ ರಕ್ಕಸ ಅಲೆಗಳು ಯಶ್ವಿತ್ ಹಾಗೂ ಯುವರಾಜ್​ನನ್ನ ಎಳೆದು ಹೀಗಿವೆ. ಉಳಿದ ನಾಲ್ಕು ಮಂದಿ ಪಾರಾಗಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಈಜು ತಜ್ಞರು ಭೇಟಿ ನೀಡಿದ್ದಾರೆ. ನಿರುಪಾಲಾದ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಉಳ್ಳಾಲ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Exit mobile version