Site icon PowerTV

ಕೈಗಾರಿಕಾ ನೀತಿಯಡಿ ಕನ್ನಡಿಗರಿಗೆ ಶೇ.70 ರಷ್ಟು ಉದ್ಯೋಗ : ಎಂ.ಬಿ. ಪಾಟೀಲ್

ಬೆಂಗಳೂರು : ಕೈಗಾರಿಕಾ ನೀತಿಯಡಿ ಕನ್ನಡಿಗರಿಗೆ ಶೇ. 70 ರಷ್ಟು ಉದ್ಯೋಗ ನೀಡಲಾಗುವುದು ಎಂದು ಭಾರಿ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, ಕೈಗಾರಿಕಾ ನೀತಿಯಡಿ ಸರ್ಕಾರದ ಪ್ರೋತ್ಸಾಹ, ರಿಯಾಯಿತಿ ಪಡೆದಿರುವ ಕೈಗಾರಿಕೆಗಳು ‘ಡಿ’ ಗ್ರೂಪ್‌ನಲ್ಲಿ ಶೇ.100ರಷ್ಟು ಹಾಗೂ ಒಟ್ಟಾರೆ ಶೇ.70ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕೆಂಬ ಷರತ್ತು ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ 16 ಕಂಪನಿಗಳೊಂದಿಗೆ 1,275 ಕೋಟಿ ಬಂಡವಾಳ ಹೂಡಿಕೆಯ ವಿವಿಧ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಈ ಪೈಕಿ ಮೂರು ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು ಭೂಮಿ, ನೀರು, ವಿದ್ಯುತ್ ಪೂರೈಕೆ ಸೇರಿ ಇತರೆ ಮೂಲ ಸೌಕರ್ಯಗಳಿಗೆ ಅನುಮತಿ ನೀಡಿದೆ. ಮುಂದಿನ 3 ವರ್ಷಗಳಲ್ಲಿ ಎಲ್ಲಾ ಯೋಜನೆಗಳೂ ಅನುಷ್ಠಾನಗೊಳ್ಳಲಿವೆ ಎಂದು ಭರವಸೆ ನೀಡಿದ್ದಾರೆ.

ಕಾರ್ಮಿಕ ಸಾರಿಗೆ ವಲಯ ಸ್ಥಾಪನೆ

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲೇ ಕಾರ್ಮಿಕ ಸಾರಿಗೆ ವಲಯವನ್ನು ಸ್ಥಾಪಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚಾಲಕರು, ಕ್ಲೀನರ್‌, ಮೆಕ್ಯಾನಿಕ್‌ಗಳು, ಪಂಕ್ಚರ್‌ ಅಂಗಡಿಗಳಲ್ಲಿ ಕೆಲಸ ಮಾಡುವವರು ಮತ್ತಿತರರು ಇದರ ಲಾಭ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

Exit mobile version