Site icon PowerTV

ಲೀಲಾವತಿ ಅಮ್ಮ ನನಗೆ ರೋಲ್ ಮಾಡೆಲ್: ಸುಧಾರಾಣಿ

ಬೆಂಗಳೂರು: ನನಗೆ ವೈಯಕ್ತಿಕವಾಗಿ ಲೀಲಾವತಿ ಅವರು ರೋಲ್ ಮಾಡೆಲ್ ಆಗಿದ್ದರು ಎಂದು ನಟಿ ಸುಧಾರಾಣಿ ಹೇಳಿದ್ದಾರೆ. 

ಅಂತಿಮ ದರ್ಶನ ಪಡೆದು ಲೀಲಮ್ಮನ ನೆನೆದ ನಟಿ ಸುಧಾರಾಣಿ ನಾನು ನಟಿಸಿದ ಮೊದಲ ಚಿತ್ರದಲ್ಲೇ ಲೀಲಾವತಿ ಅವರ ಜೊತೆ ನಟಿಸುವ ಚಾನ್ಸ್ ಸಿಕ್ಕಿತ್ತು. ಕಳೆದ ಒಂದೂವರೆ ತಿಂಗಳ ಹಿಂದೆ ಅವರನ್ನ ಭೇಟಿಯಾಗಿದ್ದೆ, ಇದೀಗ ನಾನು ನಟಿಸುತ್ತಿರೋ ಧಾರಾವಾಹಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ನನಗೆ ವೈಯಕ್ತಿಕವಾಗಿ ಲೀಲಾವತಿ ಅವರು ರೋಲ್ ಮಾಡೆಲ್ ಆಗಿದ್ದರು. ನಟಿ, ತಾಯಿಯಾಗಿ ಮಾತ್ರವಲ್ಲ ಪರಿಸರ ಪ್ರೇಮಿಯಾಗಿ, ಸಮಾಜಮುಖಿ ಕಾರ್ಯಗಳ ಮೂಲಕ ಲೀಲಾವತಿ ಆದರ್ಶ ವ್ಯಕ್ತಿಯಾಗಿದ್ದರು. ಲೀಲಾವತಿ ನಿಧನದಿಂದ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟ ಆಗಿದೆ ಎಂದು ಭಾವುಕ ನುಡಿಗಳನ್ನ ಆಡಿದ್ಧಾರೆ.

 

Exit mobile version