Site icon PowerTV

ಕರ್ತವ್ಯದಲ್ಲಿದ್ದ ರಾಜ್ಯದ ಯೋಧ ಮಣಿಪುರದಲ್ಲಿ ನಿಧನ

ಹಾಸನ : ಕರ್ತವ್ಯದಲ್ಲಿದ್ದ ಕರ್ನಾಟಕದ ಯೋಧ ನಿನ್ನೆ ಅನಾರೋಗ್ಯದಿಂದ ಮಣಿಪುರದಲ್ಲಿ ಮೃತಪಟ್ಟಿದ್ದಾರೆ.

ಪದ್ಮರಾಜು (52) ಮೃತ ಯೋಧ. ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪದ್ಮರಾಜು, ಹಾಸನದ ಕೆ.ಆರ್.ಪುರಂ ನಿವಾಸಿ ಆಗಿದ್ದರು.

ಮೃತ ಪದ್ಮರಾಜು 31 ವರ್ಷದಿಂದ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪದ್ಮರಾಜು ನಿಧನಕ್ಕೆ ಹೆಚ್ಚಿನ ಕಾರಣ ತಿಳಿದುಬಂದಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಕೆ.ಆರ್.ಪುರಂ ನಿವಾಸಕ್ಕೆ ಪದ್ಮರಾಜು ಪಾರ್ಥಿವ ಶರೀರ ಬಂದಿದೆ.

ಇಂದು ಮಧ್ಯಾಹ್ನದ ಬಳಿಕ ಹಾಸನದ ಹೊರವಲಯದ ಬಿಟ್ಟಗೋಡನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ನೂರಾರು ಮಂದಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

Exit mobile version