Site icon PowerTV

ಭಾರತ ಕಂಡ ಶ್ರೇಷ್ಠ ಕಲಾವಿದೆ ಲೀಲಾವತಿ: ನಟ ಉಪೇಂದ್ರ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ ನಿಧನಕ್ಕೆ ಉಪೇಂದ್ರ ಅವರು ಸಂತಾಪ ಸೂಚಿಸಿದ್ದಾರೆ. ಇದೀಗ ಲೀಲಾವತಿ ಅವರ ಅಂತಿಮ ದರ್ಶನ ಪಡೆದಿದ್ದಾರೆ.

ಲೀಲಾವತಿ ಅವರು ಕನ್ನಡ ಚಿತ್ರರಂಗದ ಶ್ರೇಷ್ಠ ನಟಿ ಎಂದು ಉಪೇಂದ್ರ ಮಾತನಾಡಿದ್ದು. ಹಿರಿಯ ನಟಿಯ ನಿಧನದ ಬಗ್ಗೆ ಭಾವುಕರಾಗಿದ್ದಾರೆ. ಲೀಲಾವತಿ ಅವರು ಭಾರತಕ್ಕೆ ಗೊತ್ತು ಅವರೆಂತಹ ಶ್ರೇಷ್ಠ ಕಲಾವಿದೆ ಅಂತ. ಅವರನ್ನು ಇಂದು ಕಳೆದುಕೊಂಡಿದ್ದೀವಿ. ತಾನು ಹೋಗ್ತೀನಿ ಅಂತ ಅವರಿಗೆ ಮೊದಲೇ ಗೊತ್ತಿತ್ತು ಅನಿಸುತ್ತೆ. ಆಸ್ಪತ್ರೆ ಕಟ್ಟಿಸೋದು ಸೇರಿದಂತೆ ಸಾಕಷ್ಟು ಸಮಾಜ ಸೇವೆ ಮಾಡಿಯೇ ಹೋಗಿದ್ದಾರೆ.

ಇದನ್ನೂ ಓದಿ: ನನ್ನ 2ನೇ ತಾಯಿ ಲೀಲಮ್ಮ: ಅನಂತ್‌ನಾಗ್ ಭಾವುಕ

ವಿನೋದ್ ರಾಜ್ ಹೇಳುತ್ತಿದ್ದರು ಅವರಿಗೆ ತುಂಬಾ ಕನಸಿತ್ತು ಅಂತ. ಅದನ್ನ ಈಡೇರಿಸುತ್ತೇನೆ ಎಂದು ಕೂಡ ಹೇಳಿದ್ದರು. ಅದನ್ನೆಲ್ಲಾ ಪೂರೈಸುವ ಶಕ್ತಿ ದೇವರು ಅವರಿಗೆ ಕೊಡಲಿ ಅಂತ ಉಪೇಂದ್ರ ಮಾತನಾಡಿದ್ದಾರೆ.

Exit mobile version