Site icon PowerTV

ಲೀಲಮ್ಮನ ಫೋಟೋ ಮುಂದೆ ಕಣ್ಣೀರಿಟ್ಟ ಪ್ರೀತಿಯ ಶ್ವಾನ

ಬೆಂಗಳೂರು: ಶ್ವಾನ ಬ್ಲ್ಯಾಕಿ ಲೀಲಾವತಿಯವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆದಿದೆ. ತನ್ನನ್ನು ಮುದ್ದಿಸುತ್ತಿದ್ದ, ಪ್ರೀತಿಸುತ್ತಿದ್ದ ಲೀಲಮ್ಮನಿಗೆ ಬ್ಲ್ಯಾಕಿ ನಮಸ್ಕರಿಸಿ ಕಣ್ಣೀರಿಟ್ಟಿದೆ.

ನಟಿ ಲೀಲಾವತಿ ಅವರ ನಿಧನಕ್ಕೆ ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ. ಲೀಲಾವತಿ ಅವರ ಸೋಲದೇವನಹಳ್ಳಿ ತೋಟದ ಮನೆಯಲ್ಲೂ ನೀರವ ಮೌನ ಮಡುಗಟ್ಟಿದೆ. ಲೀಲಾವತಿ ಅವರ ಅಚ್ಚು ಮೆಚ್ಚಿನ ಶ್ವಾನದ ವೇದನೆ ಕೂಡ ಹೇಳತೀರದಾಗಿದೆ.

ಇದನ್ನೂ ಓದಿ: ಸೂರ್ಯನ ಸಂಪೂರ್ಣ ಚಿತ್ರ ಕ್ಲಿಕ್ಕಿಸಿದ ಆದಿತ್ಯ L1

ಲೀಲಾವತಿ ಪ್ರಾಣಿ ಪ್ರೀಯರು. ಎಲ್ಲರನ್ನು ಎಷ್ಟು ಚೆನ್ನಾಗಿ ಮಾತನಾಡಿಸುತ್ತಾ, ಪ್ರೀತಿಸುತ್ತಿದ್ದರು ಅಷ್ಟೇ ಪ್ರಾಣಿಯನ್ನು ಪ್ರೀತಿಸುವ ಸ್ವಭಾವ. ಅದಕ್ಕೆ ಪ್ರಮುಖ ಉದಾಹಣೆ ಎಂದರೆ ಇತ್ತೀಚೆಗೆ ನಿರ್ಮಿಸಿದ ಪಶು ಆಸ್ಪತ್ರೆ. 45 ಲಕ್ಷ ರೂಪಾಯಿ ಖರ್ಚು ಮಾಡಿ ಅದನ್ನು ನಿರ್ಮಿಸಿದ್ದಾರೆ. ಅದರಂತೆಯೇ ಮನೆಯ ಮುದ್ದಿನ ಶ್ವಾನ ಬ್ಲ್ಯಾಕಿ ಎಂದರೆ ಲೀಲಮ್ಮನಿಗೆ ಅಷ್ಟೇ ಪ್ರೀತಿ. ಬ್ಲ್ಯಾಕಿಗೂ ತನ್ನ ಯಜಮಾನಿಯನ್ನು ಕಂಡರೆ ಅಷ್ಟೇ ಇಷ್ಟ.

ಅನೇಕ ವರ್ಷಗಳಿಂದ ಲೀಲಾವತಿ ಅವರ ಮನೆಯಲ್ಲಿದ್ದ ಶ್ವಾನ ‘ಕರಿಯ’, ರಾತ್ರಿಯಿಂದ ಲೀಲಾವತಿ ಅವರ ಪೋಟೋ ಮುಂದೆ ಕುಳಿತು ಕಣ್ಣೀರು ಹಾಕಿದೆ. ಈ ದೃಶ್ಯ ಲೀಲಾವತಿ ಅವರ ಅಭಿಮಾನಿಗಳಿಗೂ ಕಣ್ಣೀರು ತರಿಸಿದೆ.

 

Exit mobile version