Site icon PowerTV

BBK 10 : ಕ್ಯಾಪ್ಟನ್ಸಿ ಟಾಸ್ಕ್‌ನಿಂದ ನಮ್ರತಾ, ವಿನಯ್‌ ಹೊರಗೆ; ಸ್ನೇಹಿತ್‌ ಹೀಗೂ ಮಾಡಬಹುದಾ?

ಬೆಂಗಳೂರು: ಬಿಗ್‌ಬಾಸ್ ಮನೆ ಈ ವಾರದಲ್ಲಿ ಹಲವು ಕೋಲಾಹಲಗಳಿಗೆ, ಕೋಪ ತಾಪಗಳಿಗೆ, ಜಗಳಗಳಿಗೆ, ರೋಷಾವೇಶಗಳಿಗೆ ಸಾಕ್ಷಿಯಾಗಿದೆ.

ಇನ್ನೂ ಈ ವಾರದ ಕೊನೆ ಸಮೀಪಿಸುತ್ತಿದ್ದಂತೆಯೇ ಮನೆಯೊಳಗಿನ ಲೆಕ್ಕಾಚಾರಗಳೂ ಬದಲಾಗುತ್ತಿವೆ. JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೋಮೊ ಇಂಥದ್ದೇ ಒಂದು ಅಚ್ಚರಿಯ ಲೆಕ್ಕಾಚಾರಕ್ಕೆ ಸಾಕ್ಷಿಯಾಗಿದೆ.

ಮನೆಯ ಕ್ಯಾಪ್ಟನ್ ಆಗಿರುವ ಸ್ನೇಹಿತ್‌ ವಿಶೇಷ ಅಧಿಕಾರವನ್ನು ಪಡೆದಿದ್ದರು. ಆ ಅಧಿಕಾರದ ಪ್ರಕಾರ ಮನೆಯೊಳಗಿನ ಹಲವು ಸಂಗತಿಗಳ ಬಗ್ಗೆ ಅವರ ನಿರ್ಧಾರವೇ ಅಂತಿಮವಾಗಿತ್ತು. ಅಲ್ಲದೆ ಮನೆಯಲ್ಲಿ ತಂಡಗಳನ್ನು ರಚಿಸುವ, ವಾರವಿಡೀ ಬಿಗ್‌ಬಾಸ್ ನೀಡುವ ಟಾಸ್ಕ್‌ಗಳ ಉಸ್ತುವಾರಿ ವಹಿಸುವ ಜವಾಬ್ದಾರಿಯನ್ನೂ ಸ್ನೇಹಿತ್‌ಗೆ ಒಪ್ಪಿಸಲಾಗಿತ್ತು.

ತಂಡವನ್ನು ರಚಿಸುವ ಹಂತದಲ್ಲಿಯೇ ಉಸ್ತುವಾರಿಯೊಂದಿಗೆ ಉಂಟಾದ ಭಿನ್ನಾಭಿಪ್ರಾಯ ವಾರವಿಡೀ ಮುಂದುವರಿಯಿತು. ಸಂಗೀತಾ ನಾಯಕತ್ವದ ತಂಡದ ಪ್ರಕಾರ ಸ್ನೇಹಿತ್‌, ವರ್ತೂರು ಅವರ ತಂಡದ ಪರವಾಗಿ ನಿರ್ಣಯಗಳನ್ನು ನೀಡುತ್ತಿದ್ದಾರೆ. ನಮ್ರತಾ ಮತ್ತು ವಿನಯ್ ಅವರಿಂದ ಪ್ರಭಾವಿತರಾಗಿ ತಮ್ಮ ನಿರ್ಧಾರಗಳನ್ನು ಬದಲಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇದ್ದವು.ಆದರೆ ವಾರಾಂತ್ಯದಲ್ಲಿ ಬಿಗ್‌ಬಾಸ್‌, ಸ್ನೇಹಿತ್‌ಗೆ ಮತ್ತೊಂದು ಜವಾಬ್ದಾರಿ ವಹಿಸಿದ್ದಾರೆ. ‘ಮನೆಯ ಸದಸ್ಯರ ಪೈಕಿ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಸಲು ಅನರ್ಹರಾದ ಸದಸ್ಯರನ್ನು ಸೂಚಿಸಿ’ ಎಂದು ಬಿಗ್‌ಬಾಸ್ ಕೇಳಿದ್ದಾರೆ. ಇದಕ್ಕೆ ಎಲ್ಲರೂ ಅಚ್ಚರಿ ಪಡುವಂತೆ ಸ್ನೇಹಿತ್ ನಾಮಿನೇಟ್ ಮಾಡಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್​ನಿಂದ ನಾಮಿನೇಟ್​ ಆದ ನಮ್ರತಾ ಮತ್ತು ವಿನಯ್

ಸ್ನೇಹಿತ್​ ಈ ವಾರ  ನಾಮಿನೇಟ್ ಮಾಡಿದ ಎರಡು ಮುಖ್ಯ ಸದಸ್ಯರೆಂದರೆ, ನಮ್ರತಾ ಮತ್ತು ವಿನಯ್!
ಇದಕ್ಕೆ ಅವರು ಕೊಟ್ಟ ಕಾರಣ, ‘ವಿನಯ್ ಮತ್ತು ನಮ್ರತಾ ಇಬ್ಬರೂ ಉಸ್ತುವಾರಿಯಾದ ನನ್ನ ಮಾತುಗಳನ್ನು ಮೀರಿದ್ದಾರೆ’ ಎಂಬುದು.

ತಮ್ಮನ್ನು ಖಂಡಿತ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಡುವುದಿಲ್ಲ ಎಂದೇ ನಂಬಿದ್ದ ವಿನಯ್‌ ಮತ್ತು ನಮ್ರತಾ ಇಬ್ಬರಿಗೂ ಸ್ನೇಹಿತ್‌ ಮಾತು ಕೇಳಿ ಆಘಾತವಾಗಿದೆ. ‘ಇವ್ನೆಂತಾ ಫ್ರೆಂಡ್‌’ ಎಂದು ನಮ್ರತಾ ಕಣ್ಣಲ್ಲಿ ನೀರು ತುಂಬಿಕೊಂಡಿದ್ದಾರೆ. ಇನ್ನೂ ಯಾರೆಲ್ಲಾ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದಾರೆ? ಕೊನೆಗೆ ಮನೆಯ ಕ್ಯಾಪ್ಟನ್ ಆಗುವುದು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ಕಾದು ನೋಡಬೇಕಷ್ಟೆ.

 

Exit mobile version