Site icon PowerTV

ತಾಳಿ ಕಟ್ಟುವ ವೇಳೆ ‘ಮದುವೆ ಬೇಡ’ ಅಂತ ಶಾಕ್ ಕೊಟ್ಟ ಮದುಮಗಳು..!

ಚಿತ್ರದುರ್ಗ: ತಾಳಿ ಕಟ್ಟುವ ವೇಳೆ ವಧು ನನಗೆ ಮದುವೆ ಬೇಡ ಎಂದು ಶಾಕ್​ ನೀಡಿರುವ ಘಟನೆ ಹೊಸದುರ್ಗ ತಾಲೂಕಿನ ಚಿಕ್ಕಬ್ಯಾಲದಕೆರೆಯಲ್ಲಿ ನಡೆದಿದೆ.

ಚಿಕ್ಕಬ್ಯಾಲದಕೆರೆಯ ಸಂತೋಷ ಸಿ.ಎಲ್ ಹಾಗೂ ಚಳ್ಳಕೆರೆ ತಾಲೂಕಿನ ತಿಪ್ಪರೆಡ್ಡಿಹಳ್ಳಿಯ ಯಮುನಾ ಜಿ.ಎಂ ಮದುವೆ ನಿಶ್ಚಯ ಆಗಿತ್ತು. ಹೀಗಾಗಿ ಚಿಕ್ಕಬ್ಯಾಲದಕೆರೆಯ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ಜರುಗುತ್ತಿತ್ತು. ಆರತಕ್ಷತೆಯ ವೇಳೆ ಚೆನ್ನಾಗಿಯೇ ಇದ್ದ ವಧು ಏಕಾಏಕಿ ನನಗೆ ಮದುವೆ ಬೇಡ ಎಂದು ಹೇಳಿರುವುದು ಎಲ್ಲಾರಿಗೂ ಅಚ್ಚರಿಯಾಗಿದೆ.

ಇದನ್ನೂ ಓದಿ: ಐತಿಹಾಸಿಕ ಕಡಲೆಕಾಯಿ ಪರಿಷೆ ನಾಳೆ ಶುರು: ಪರ್ಯಾಯ ಮಾರ್ಗ ವ್ಯವಸ್ಥೆ ಹೀಗಿದೆ ನೋಡಿ 

ನಾನಿನ್ನು ಓದಬೇಕು ಎಂಬ ಕಾರಣ ಹೇಳಿದ್ದಾಳೆ. ಅಲ್ಲೇ ನಿಂತುಕೊಂಡಿದ್ದ ವಧು ಪೋಷಕರು ಎಷ್ಟೇ ಹೇಳಿದ್ರೂ ತಾಳಿ ಕಟ್ಟಿಸಿಕೊಳ್ಳದೆ ಅಲ್ಲಿಂದ ಎದ್ದು ಹೋಗಿದ್ದಾಳೆ. ಹೀಗಾಗಿ ವಧು ಒಪ್ಪದ ಹಿನ್ನೆಲೆ ಮದುವೆ ಮುರಿದು ಬಿದಿದ್ದೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

 

Exit mobile version