Site icon PowerTV

ಶಾಸಕ ಯತ್ನಾಳ್​ರನ್ನು ಬಂಧನಕ್ಕೆ ಒಳಪಡಿಸಬೇಕು : ಮುಸ್ಲಿಂ ಮುಖಂಡರ ಆಗ್ರಹ

ವಿಜಯಪುರ : ತನ್ವೀರಾ ಪೀರಾ ಅವರು ಐಎಸ್ಐಎಸ್ ನಂಟು ಹೊಂದಿದ್ದಾರೆ ಎಂದು ವಿಜಯಪುರ ನಗರ ಶಾಸಕ ಯತ್ನಾಳ ಹೇಳಿಕೆ ನೀಡಿದ ಬೆನ್ನಲ್ಲೇ ಅದರ ಅಲ್ಪಸಂಖ್ಯಾತ ಹಾಗೂ ಅಹಿಂದಾ ಸಮಾಜದ ಮುಖಂಡರು ಜಂಟಿ‌ ಪತ್ರಿಕಾಗೋಷ್ಠಿ ನಡೆಸಿ ಶಾಸಕ ಯತ್ನಾಳ್ ಅವರ ವಿರುದ್ದ ಆಕ್ರೋಶ ಹೊರಹಾಕಿದರು.

ಅಲ್ಪಸಂಖ್ಯಾತ ಮುಖಂಡ ಎಸ್.ಎಂ.ಪಾಟೀಲ ಗಣಿಯಾರ ಮಾತನಾಡಿದ ಅವರು, ಯತ್ನಾಳ್ ಅವರು ಯಾವಾಗಲೂ ಮುಸ್ಲಿಂ ಅವರ ಮೇಲೆ ದ್ವೇಷ ಕಾರುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಸಾಬೀತು ಪಡಿಸಿ ನಾನು ದೇಶ ಬಿಟ್ಟು ಹೋಗುವೆ ಎಂದು ತನ್ವೀರ ಪೀರಾ ಅವರು ಈಗಾಗಲೇ ಚಾಲೆಂಜ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಶಾಸಕ ಯತ್ನಾಳ್ ಅವರು ಹಾಕಿರುವ ಫೋಟೋ ತನ್ವೀರಾ ಪೀರಾ ಅವರು ತಮ್ಮ ಫೇಸ್ ಬುಕ್​ನಲ್ಲಿ ಹಾಕಿರುವ ಫೋಟೋಗಳನ್ನೇ ಶೇರ್ ಮಾಡಿದ್ದಾರೆ. ಇರಾಕ್ ದೇಶದ ರಾಜಧಾನಿ ಬಗ್ದಾದ್​ನಲ್ಲಿ ಒಂದು ದರ್ಗಾ ಇದೆ ಆ ದರ್ಗಾದ ಧರ್ಮಗುರುಗಳೊಂದಿಗೆ ಕುಳಿತಿರುವ ಫೋಟೋ ಶೇರ್ ಮಾಡಿದ್ದಾರೆ. ಇದಕ್ಕೆ ಅವರು ಐಎಸ್ಐಎಸ್ ಲಿಂಕ್ ಕೊಡುವುದು ಎಷ್ಟರ ಮಟ್ಟಿಗೆ ಸರಿ. ಶಾಸಕ ಯತ್ನಾಳ ಅವರಿಗೆ ಬಂಧನಕ್ಕೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ತನಿಖೆಗೆ ಆದೇಶ ಮಾಡಿಸಿ

ಈ ಕುರಿತು ಶಾಸಕ ಯತ್ನಾಳ್ ಪ್ರತಿಕ್ರಿಯಿಸಿದ್ದು, ಇಂತಹವರಿಗೆ ಕ್ಲೀನ್ ಚಿಟ್ ಕೊಡುವುದರಲ್ಲಿ ಮುಖ್ಯಮಂತ್ರಿಗಳು ಎತ್ತಿದ ಕೈ. ತನಿಖೆಯೇ ಮಾಡದೆ ಕ್ಲೀನ್ ಚಿಟ್ ಕೊಟ್ಟಿರುವುದು ಓಲೈಕೆ ರಾಜಕಾರಣಕ್ಕೆ ಅಲ್ಲದೆ ಮತ್ತೇನು? ವಿಚಾರವಿಲ್ಲದೆ ಇದ್ದರೇ ತನಿಖೆಗೆ ಆದೇಶ ಮಾಡಿಸಿ, ಓಲೈಕೆಗಾಗಿ ಏನೇನು ಮಾಡುತ್ತೀರಿ? ಭಯೋತ್ಪಾದಕರನ್ನು ಬೆಂಬಲಿಸುವ ನಿಮ್ಮ ಚಾಳಿ ಇನ್ನಾದರೂ ಬಿಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

Exit mobile version