Site icon PowerTV

ಡಿಕೆಶಿ ‘ನಾರಾಯಣ ಹೃದಯಾಲಯ’ದಲ್ಲಿ ಬೆಡ್ ಬುಕ್ ಮಾಡಿಕೊಳ್ಳಲಿ : ಶಾಸಕ ಯತ್ನಾಳ್ ತಿರುಗೇಟು

ವಿಜಯಪುರ : ತಮ್ಮನ್ನು ನಿಮ್ಹಾನ್ಸ್​ ಆಸ್ಪತ್ರೆಗೆ ಸೇರಿಸಬೇಕು ಎಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಡು ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಭ್ರಷ್ಟಾಚಾರ ಆರೋಪಿ’ ಮೊದಲು ‘ನಾರಾಯಣ ಹೃದಯಾಲಯ’ದಲ್ಲಿ ಬೆಡ್ ಬುಕ್ ಮಾಡಿಕೊಳ್ಳಲಿ. ಮತ್ತೆ ಜಾಮೀನು ಪಡೆಯೋಕ್ಕೆ ಇನ್ನೊಂದು ನಾಟಕ ಮಾಡಬೇಕಾಗುತ್ತೆ ಎಂದು ಕುಟುಕಿದ್ದಾರೆ.

ಜಾಮೀನು ಪಡೆಯುವುದಕ್ಕೆ ನ್ಯಾಯಾಲಯದ ಮುಂದೆ ಬಿಪಿ, ಶುಗರ್ ಅಂತ ಕಥೆ ಹೇಳಿ ಓಡಿ ಹೋಗುವವನು ನಾನಲ್ಲ. ಈ ಬಸನಗೌಡ ಪಾಟೀಲ್ ನ್ಯಾಯಕ್ಕಾಗಿ ಏನು ಬೇಕಾದರೂ ಎದುರಿಸುವ ನಾಯಕ ಎಂದು ಡಿಕೆಶಿಗೆ ಟಕ್ಕರ್ ಕೊಟ್ಟಿದ್ದಾರೆ.

ಓಲೈಕೆ ಮಾಡೋದು ನಿಲ್ಲಿಸಿ

ಇನ್ನೂ ಹೆಚ್.ಕೆ ಪಾಟೀಲ್​ ಅವರಿಗೂ ಟಾಂಗ್ ಕೊಟ್ಟಿರುವ ಅವರು, ಪಾಟೀಲರೇ.. ಇನ್ನಾದರೂ ಓಲೈಕೆ ಮಾಡೋದು ನಿಲ್ಲಿಸಿ. ನಾನೇ ತನಿಖೆ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಪತ್ರ ಬರೆದಿದ್ದೀನಿ. ನೀವೂ ತನಿಖೆಗೆ ಆದೇಶಿಸಿ, ಅಲ್ಲಿದ್ದ ನೂರಾರು ಮೌಲ್ವಿಗಳನ್ನು ಹೊರತು ಸಾಕ್ಷಿ ಇರುವ ಕಾರಣಕ್ಕಾಗಿಯೇ ಈ ವ್ಯಕ್ತಿಯ ವಿರುದ್ಧ ಆರೋಪ ಮಾಡಿರುವುದು ಎಂದು ಕುಟುಕಿದ್ದಾರೆ.

Exit mobile version