Site icon PowerTV

‘ಯತ್ನಾಳ್ ಸುಳ್ಳುಗಾರ’ ಎಂದ ಸಿದ್ದರಾಮಯ್ಯ : ಆರೋಪ ಸುಳ್ಳಾಗಿದ್ದರೇ ತನಿಖೆಗೆ ಆದೇಶ ಮಾಡಿ ಎಂದು ಯತ್ನಾಳ್ ಸವಾಲ್

ವಿಜಯಪುರ : ಯತ್ನಾಳ್ ಮಹಾನ್ ಸುಳ್ಳುಗಾರ, ಕೇವಲ ಆರೋಪ ಮಾಡುವುದಲ್ಲ, ಸಾಬೀತುಪಡಿಸಲಿ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿ ಸವಾಲ್ ಹಾಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯನವರು ಓಲೈಕೆ ರಾಜಕಾರಣದ ಕಾರಣಕ್ಕೆ ಹೀಗಾಗಿದ್ದರೆ, ಆರೋಪ ಸುಳ್ಳಾಗಿದ್ದರೇ ತನಿಖೆಗೆ ಆದೇಶ ಮಾಡಲಿ ಎಂದು ಪ್ರಶ್ನೆ ಮಾಡಿದ್ದಾರೆ.

ಐಸಿಸ್ ನಂಟಿರುವ ಮೌಲ್ವಿ ಹಾಗೂ ಇಂತಹವರಿಗೆ ಕ್ಲೀನ್ ಚಿಟ್ ಕೊಡುವುದರಲ್ಲಿ ಮುಖ್ಯಮಂತ್ರಿಗಳು ಎತ್ತಿದ ಕೈ. ತನಿಖೆಯೇ ಮಾಡದೆ ಕ್ಲೀನ್ ಚಿಟ್ ಕೊಟ್ಟಿರುವುದು ಓಲೈಕೆ ರಾಜಕಾರಣಕ್ಕೆ ಅಲ್ಲದೆ ಮತ್ತೇನು? ತನಿಖೆ ಆದೇಶ ಮಾಡುವುದನ್ನು ಬಿಟ್ಟು ಹಾರಿಕೆಯ ಉತ್ತರವನ್ನು ನೀಡುತ್ತಿರುವುದು ಯಾರನ್ನು ರಕ್ಷಣೆ ಮಾಡಲು? ಎಂದು ಹರಿಹಾಯ್ದಿದ್ದಾರೆ.

ಓಲೈಕೆಗಾಗಿ ಏನೇನು ಮಾಡುತ್ತೀರಿ?

ಗುಲಾಮರೇ, ವಿಚಾರವಿಲ್ಲದೆ ಇದ್ದರೇ ತನಿಖೆಗೆ ಆದೇಶ ಮಾಡಿಸಿ. ಓಲೈಕೆಗಾಗಿ ಏನೇನು ಮಾಡುತ್ತೀರಿ? ಭಯೋತ್ಪಾದಕರನ್ನು ಬೆಂಬಲಿಸುವ ನಿಮ್ಮ ಚಾಳಿ ಇನ್ನಾದರೂ ಬಿಡಿ. ಓಲೈಕೆಗಾಗಿ ದೇಶವನ್ನೇ ಇಬ್ಬಾಗ ಮಾಡಿದ ಹಿನ್ನಲೆ ಇರುವ ನಿಮಗೆ ವಿರೋಧ ಮಾತನಾಡಲು ಹೇಗೆ ಸಾಧ್ಯ? ಎಂದು ಕಿಡಿಕಾರಿದ್ದಾರೆ.

Exit mobile version