Site icon PowerTV

ಶಕ್ತಿ ಯೋಜನೆ ಎಫೆಕ್ಟ್​: ಬಸ್​​ಗಳನ್ನ ತಡೆದು ಗ್ರಾಮಸ್ಥರು ಪ್ರತಿಭಟನೆ!

ಮೈಸೂರು: ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯದ ಎಫೆಕ್ಟ್​​​​ನಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಹಿನ್ನಲೆ ಮೈಸೂರು-ಚಾಮರಾಜನಗರ ಬಸ್ ಸಂಚಾರ ಬಂದ್​​ ಮಾಡಿರುವ ಘಟನೆ ನಂಜನಗೂಡು ಬಳಿ ನಡೆದಿದೆ.

ತಾಲೂಕಿನ ವೀರಗೌಡನಪುರ ಬಳಿ ವಿದ್ಯಾರ್ಥಿಗಳಿಗೆ ಸಾಥ್​ ನೀಡಿದ ಪೋಷಕರು ಮತ್ತು ಗ್ರಾಮಸ್ಥರು ಕೆಎಸ್​ಆರ್​ಟಿಸಿ ಬಸ್ ತಡೆದು ಆಕ್ರೋಶ ಹೊರ ಹಾಕಿದ್ದಾರೆ. ಸ್ಥಳಕ್ಕೆ ಸಾರಿಗೆ ಇಲಾಖೆಯ ಅಧಿಕಾರಿಗಳು ಬರುವಂತೆ ಒತ್ತಾಯಿಸಿದ್ದಾರೆ. ಶಕ್ತಿ ಯೋಜನೆ ಹಿನ್ನೆಲೆ ಕಳೆದ ಎರಡು ತಿಂಗಳಿಂದ ನಮ್ಮ ಊರಿನಲ್ಲಿ ಯಾವ ಬಸ್​​ಗಳು ನಿಲ್ಲಿಸುತ್ತಿಲ್ಲ. ಇದರಿಂದಾಗಿ ನಿತ್ಯ ಶಾಲಾ ಕಾಲೇಜುಗಳಿಗೆ  ತೆರಳುವ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ತೆರಳಲಾಗದೇ ತೊಂದರೆ ಅನಿಭವಿಸುವಂತಾಗಿದೆ ಎಂದರು.

ಇದನ್ನೂ ಓದಿ: ಡಿ.7ಕ್ಕೆ ರೇವಂತ್​ ರೆಡ್ಡಿ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ

ಘಟನೆಯಿಂದಾಗಿ ಮೈಸೂರು ಚಾಮರಾಜನಗರ ಮಾರ್ಗದಲ್ಲಿ ಸುಮಾರು ಒಂದು ಕಿ.ಮೀ ವರೆಗೆ ವಾಹದ ದಟ್ಟಣೆ ಉಂಟಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಕೂಡಲೇ ಸ್ಥಳಕ್ಕೆ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವವರೆಗೂ ರಸ್ತೆ ಬಿಟ್ಟು ಹೋಗಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

Exit mobile version