Site icon PowerTV

PPR ವೈರಸ್ ಸೋಂಕಿನಿಂದ ಮೇಕೆಗಳ ಸಾವು! ಆತಂಕದಲ್ಲಿ ರೈತರು

ಚಾಮರಾಜನಗರ: PPR (Peste Des Petits Ruminants) ವೈರಸ್​​​ನಿಂದ ಮೇಕೆಗಳ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಳೆದ 15 ದಿನಗಳಲ್ಲಿ PPR ವೈರಸ್ ಸೋಂಕಿನಿಂದ 30 ಕ್ಕೂ ಹೆಚ್ಚು ಮೇಕೆಗಳ ಸಾವನ್ನಪ್ಪಿದ್ದು, ಗ್ರಾಮಸ್ಥರು ಆತಂಕದಲ್ಲಿ‌ದ್ದಾರೆ. ಮೊದಲಿಗೆ ಸಣ್ಣ ಮರಿಗಳು ವೈರಸ್ ಸೋಂಕಿನಿಂದ ಸಾವನ್ನಪ್ಪಿವೆ. ಮೃತಪಟ್ಟ ಮೇಕೆ ಮರಿಗಳನ್ನ ಗ್ರಾಮಸ್ಥರು ಗ್ರಾಮದ ಹೊರಗೆ ಬೀಸಾಡಿದ್ದಾರೆ.

ಇದನ್ನೂ ಓದಿ: ಜಾತಿ ಕಾರಣಕ್ಕೆ ನನ್ನನ್ನು ಆರ್​ಎಸ್​ಎಸ್​ ಕಚೇರಿ ಪ್ರವೇಶಕ್ಕೆ ನಿರಾಕರಿಸಿದ್ದಾರೆ: ಗೂಳಿಹಟ್ಟಿ ಶೇಖರ್

ದಿನೇ ದಿನೇ ಹೆಚ್ಚುತ್ತಿರುವ ಮೇಕೆಗಳ ಸಾವಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಈ ಕುರಿತು ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Exit mobile version