Site icon PowerTV

ಛಲವಾದಿ ಮಹಾಸಭಾದಿಂದ ಡಾ. ಬಿ.ಆರ್​ ಅಂಬೇಡ್ಕರ್​ ರ 67ನೇ ಪರಿನಿರ್ವಾಣ ದಿನ ಆಚರಣೆ

ದೊಡ್ಡಬಳ್ಳಾಪುರ: ಜಾತಿ -ಜಾತಿಗಳ ನಡುವೆ ಸಂಘರ್ಷಗಳು ಹೆಚ್ಚಾಗಿರುವ ಸಂಧಿಗ್ದ ಪರಿಸ್ಥಿತಿಯಲ್ಲಿ ಜಾತಿಗಳ ಉಳಿಯುವಿಕೆಯು ಅತ್ಯಂತ ಜರೂರಾಗಿದೆ ಎಂದು ಛಲವಾದಿ ಮಹಾಸಭಾದ ಅಧ್ಯಕ್ಷರಾದ ಸಿ, ಗುರುರಾಜಪ್ಪ ಅವರು ಪ್ರತಿಪಾದಿಸಿದರು.

ಮಹಾಮಾನವತಾವಾದಿ, ವಿಶ್ವಾಜ್ಞಾನಿ, ಡಾ. ಬಾಬಾ ಸಾಹೇಬರ 67ನೇ ಪರಿನಿರ್ವಾಣದ ಅಂಗವಾಗಿ ಇಂದು ನಗರದ ಹಳೇ ಬಸ್ ನಿಲ್ದಾಣದಲ್ಲಿರುವ ಬಾಬಾ ಸಾಹೇಬರ ಪುತ್ತಿಳಿಗೆ ಛಲವಾದಿ ಮಹಾಸಭಾ ವತಿಯಿಂದ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ನಂತರ, ಸಂವಿಧಾನ ಪೀಠಿಕೆಯನ್ನು ಭೋದಿಸಿ, ಸಂವಿಧಾನದ ಉಳಿವಿಗಾಗಿ ಹೋರಾಟ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ ಡಿ, ಎನ್, ಎಲ್, ಎನ್, ಮೂರ್ತಿಯವರು ಮಾತನಾಡಿದರು. ದೊಡ್ಡಬೆಳವಂಗಲ ಹೋಬಳಿಯ ಅಧ್ಯಕ್ಷರಾದ ಎನ್, ಉದಯಶಂಕರ್, ಕುಮಾರ್ ಸ್ವಾಮಿ, ಮುನಿಯಪ್ಪ, ಹನುಮಂತರಾಜು, ಅಂಜಿನಮೂರ್ತಿ (ಶಿಕ್ಷಕರು), ಮುನಿಕೃಷ್ಣ , ಸುರೇಶ, ರಮೇಶ್, ಆನಂದ್, ನವೀನ್, ಶಿವಕುಮಾರ್,ಕಮಲಮ್ಮ ಇತರರು ಭಾಗವಹಿಸಿದ್ದರು.

Exit mobile version