Site icon PowerTV

ಪ್ರೇಮಿಗಾಗಿ ಪಾಕಿಸ್ತಾನ ತೊರೆದು ಭಾರತಕ್ಕೆ ಆಗಮಿಸಿದ ಪ್ರೇಯಸಿ

ಕೋಲ್ಕತಾ : ಪ್ರೇಯತಮನಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಭಾರತದ ಅಂಜು ವಿಚಾರ ಮಾಸುವ ಮುನ್ನವೇ ಇದೀಗ ಅಂಥಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಕೋಲ್ಕತಾ ಮೂಲದ ಪ್ರಿಯತಮನನ್ನು ಮದುವೆಯಾಗಲು ಪಾಕಿಸ್ತಾನ ಮೂಲದ ಪ್ರೇಯಸಿಯೊಬ್ಬಳು (ಮಹಿಳೆ) ಗಡಿದಾಟಿ ಭಾರತಕ್ಕೆ ಬಂದಿದ್ದಾರೆ.

ಪಾಕಿಸ್ತಾನ ಮೂಲಕ ಜವೇರಿಯಾ ಖಾನುಮ್ ಎಂಬುವವರು ವಾಘಾ-ಅಟ್ಟಾರಿ ಅಂತರಾಷ್ಟ್ರೀಯ ಗಡಿಯಿಂದ ಭಾರತಕ್ಕೆ ಆಗಮಿಸಿದ್ದಾರೆ. ಕೋಲ್ಕತ್ತಾ ಮೂಲದ ನಿವಾಸಿಯನ್ನು ವಿವಾಹವಾಗಲು ಭಾರತಕ್ಕೆ ಬಂದಿದ್ದಾರೆ.

ಜನವರಿಯಲ್ಲಿ ಈ ಪ್ರೇಮಿಗಳಿಬ್ಬರ ಮದುವೆಯನ್ನು ನಿಗದಿಪಡಿಸಲಾಗಿದೆ. ಮೂಲಗಳ ಪ್ರಕಾರ ಕರಾಚಿ ನಿವಾಸಿಯಾಗಿರುವ ಜವೇರಿಯಾ ಖಾನುಮ್ ತಮ್ಮ ಕುಟುಂಬಸ್ಥರು ನಿಶ್ಚಯಿಸಿದ ವರ ಕೋಲ್ಕತಾ ಮೂಲದ ಸಮೀರ್ ಖಾನ್ ರನ್ನು ವಿವಾಹವಾಗಲು ಭಾರತಕ್ಕೆ ಬಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಪ್ರಿಯತಮನಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಅಂಜು ಭಾರತಕ್ಕೆ ವಾಪಸ್ 

ವರನ ಕಡೆಯವರಿಂದ ಭರ್ಜರಿ ಸ್ವಾಗತ

ಜವೇರಿಯಾ ಖಾನುಮ್ ಅವರನ್ನು ಬರಮಾಡಿಕೊಳ್ಳಲು ಸಮೀರ್ ಖಾನ್ ಮತ್ತು ಅವರ ಕುಟುಂಬದ ಕೆಲವು ಸದಸ್ಯರು ಆಗಮಿಸಿದ್ದರು. ಗಡಿಯಲ್ಲಿ ಜವೇರಿಯಾ ಖಾನುಮ್ ಗೆ ವರನ ಕಡೆಯವರು ಭರ್ಜರಿ ಸ್ವಾಗತ ಕೋರಿದ್ದಾರೆ.

Exit mobile version