Site icon PowerTV

ಇಸ್ರೋ ಮತ್ತೆ ಇಡೀ ಜಗತ್ತನ್ನೇ ತನ್ನ ಸಾಹಸದಿಂದ ಅಚ್ಚರಿಗೊಳಿಸಿದೆ!

ಬೆಂಗಳೂರು: ಇಸ್ರೋ ಮತ್ತೆ ಇಡೀ ಜಗತ್ತನ್ನೇ ತನ್ನ ಸಾಹಸದಿಂದ ಅಚ್ಚರಿಗೊಳಿಸಿದೆ. ಬಾಹ್ಯಾಕಾಶದಲ್ಲಿ ಸುತ್ತುತ್ತಿದ್ದ ತನ್ನ ನೌಕೆಯನ್ನು ವಾಪಸ್‌ ಭೂಕಕ್ಷೆಗೆ ಕರೆಸಿಕೊಳ್ಳುವ ಸಾಮರ್ಥ್ಯ ತನಗಿದೆ ಎನ್ನುವುದನ್ನು ಸಾಬೀತು ಮಾಡಿದೆ.

ಚಂದ್ರನ ಸುತ್ತ ಸುತ್ತುತ್ತಿರುವ ಚಂದ್ರಯಾನ-3 ಯೋಜನೆಯ ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಮತ್ತೆ ಭೂಮಿಯ ಕಕ್ಷೆಗೆ ತಿರುಗಿಸಲಾಗಿದೆ. ಈಗ ಅದರೊಳಗೆ ಅಳವಡಿಸಲಾಗಿರುವ ಶೇಪ್‌ ಪೇಲೋಡ್ ಮೂಲಕ ಭೂ ಗ್ರಹದ ಅಧ್ಯಯನ ಮಾಡಲಾಗುತ್ತದೆ.

ಇದನ್ನೂ ಓದಿ: ರಜಪೂತ ಕರ್ಣಿ ಸೇನೆ ಅಧ್ಯಕ್ಷನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

ಶೇಪ್ ಪೆಲೋಡ್ ಅನ್ನು ಮೂರು ತಿಂಗಳವರೆಗೆ ಮಾತ್ರ ನಿರ್ವಹಿಸುವ ಯೋಜನೆಯನ್ನು ಇಸ್ರೋ ಹೊಂದಿತ್ತು. ಏಕೆಂದರೆ ಪೆಲೋಡ್ ಇಷ್ಟು ದಿನ ಮಾತ್ರ ಕೆಲಸ ಮಾಡಲು ಸಾಧ್ಯವಾಗಬಹುದು ಎಂದು ಇಸ್ರೋ ಅಂದಾಜು ಮಾಡಿತ್ತು. ಆ ಬಳಿಕ ಪೇಲೋಡ್‌ನ ಸಾಮರ್ಥ್ಯ ಕೊನೆಗೊಳ್ಳುತ್ತದೆ ಎಂದು ತಿಳಿಸಿತ್ತು. ಆದರೆ ಪ್ರೊಪಲ್ಷನ್ ಮಾಡ್ಯೂಲ್‌ನಲ್ಲಿ ಸಾಕಷ್ಟು ಇಂಧನವಿದೆ. ಹಾಗಾಗಿ ಶೇಪ್‌ ಇನ್ನಷ್ಟು ದಿನಗಳ ಕಾಲ ಕೆಲಸ ಮಾಡಬಹುದು. ಆ ಕಾರಣಕ್ಕಾಗಿ ಇದನ್ನು ಭೂಕಕ್ಷೆಗೆ ತರಲಾಗಿದೆ.

ಭೂಮಿಯನ್ನು ಶೇಪ್‌ ಮೂಲಕ ಅಧ್ಯಯನ ಮಾಡಲು, ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಭೂಮಿಯ ಹತ್ತಿರ ಮತ್ತು ಅದರ ಸರಿಯಾದ ಕಕ್ಷೆಯಲ್ಲಿ ತರಬೇಕಾಗಿತ್ತು. ಹಾಗಾಗಿ ಅದನ್ನು 100 ಕಿಲೋಮೀಟರ್ ಎತ್ತರದಲ್ಲಿ ಚಂದ್ರನ ವೃತ್ತಾಕಾರದ ಕಕ್ಷೆಯಿಂದ ಹಿಂದಕ್ಕೆ ತರಲು ಇಸ್ರೋ ನಿರ್ಧಾರ ಮಾಡಿದೆ.

Exit mobile version