Site icon PowerTV

ನಾಗರೀಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ!

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಬೆಂಗಳೂರು ಪೊಲೀಸ್ ಇಲಾಖೆ ವತಿಯಿಂದ ನಾಗರೀಕರಿಗೆ ಖುಷಿಯ ಸುದ್ದಿಯೊಂದನ್ನು ನೀಡಿದ್ದು, ನಾಗರೀಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ನಾಗರೀಕ ಬಂದೂಕು ತರಬೇತಿ ಪಡೆಯಲಿಚ್ಛಿಸುವ ನಾಗರೀಕರು ತಮ್ಮ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಟ್ಟಿರುವ ಪೊಲೀಸ್ ಠಾಣೆಗಳಲ್ಲಿ ಅರ್ಜಿಗಳನ್ನು ಪಡೆದುಕೊಂಡು ಭರ್ತಿ ಮಾಡಿದಂತಹ ಅರ್ಜಿಯನ್ನು ತಮ್ಮ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಸಲ್ಲಿಸತಕ್ಕದ್ದು.

ಇದನ್ನು ಓದಿ: ರೇವಣ್ಣ ನನ್ನನ್ನು ಏನು ಮಾಡೋಕೆ ಆಗಲ್ಲ: ಶಾಸಕ ಶಿವಲಿಂಗೇಗೌಡ ಏಕವಚನದಲ್ಲಿ ವಾಗ್ದಾಳಿ!

ಅರ್ಜಿಯೊಂದಿಗೆ ಸಲ್ಲಿಸಬೇಕಾಗಿರುವ ದಾಖಲಾತಿಗಳು:

ಇತ್ತೀಚಿನ 03 ಭಾವಚಿತ್ರಗಳು, ವೈದ್ಯಕೀಯ ಪ್ರಮಾಣ, ಆಧಾರ್ ಕಾರ್ಡ್‌ನ ಪ್ರತಿಯನ್ನು ಕಡ್ಡಾಯವಾಗಿ ನೀಡುವುದು. ಹಾಗೂ ಈಗಾಗಲೇ ಬಂದೂಕು ಹೊಂದಿರುವರು ನಾಗರೀಕರು ತರಬೇತಿ ಪಡೆಯುವುದು ಕಡ್ಡಾಯವಾಗಿದೆ.

ನಿಬಂಧನೆಗಳು:

ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು. ವಯಸ್ಸು 21 ಮೇಲ್ಪಟ್ಟಿರಬೇಕು. ಅರ್ಜಿದಾರ ಆರೋಗ್ಯವಂತರಾಗಿರುಬೇಕು ಮತ್ತು ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರಬಾರದು.

Exit mobile version