Site icon PowerTV

Karnataka Winter Session 2023: ಇಂದಿನಿಂದ ಬೆಳಗಾವಿ ಅಧಿವೇಶನ : ಸರ್ಕಾರದ ವಿರುದ್ಧ ಜಂಟಿ ಸಮರಕ್ಕೆ BJP-JDS ಸಜ್ಜು

ಬೆಳಗಾವಿ: ಇಂದಿನಿಂದ ವಿಧಾನಮಂಡಲ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಲಿದೆ. ಈಗಾಗಲೇ ಚಳಿಗಾಲದ ಅಧಿವೇಶನ ರಂಗೇರಲಿದ್ದು, ಹೊರಗಡೆ ಚಳಿಯಿದ್ದರೆ, ಸದನದ ಒಳಗೆ ಬಿಸಿ ಕಾವು ಹೆಚ್ಚಾಗಲಿದೆ.

ಚಳಿಗಾಲದ ಕದನಕ್ಕೆ ಆಡಳಿತ, ವಿಪಕ್ಷಗಳು ಸಜ್ಜಾಗಿವೆ. ಪಂಚರಾಜ್ಯ ಚುನಾವಣೆಯಲ್ಲಿ ಮೂರು ಕಡೆ ಗೆದ್ದು, ಭರ್ಜರಿ ಫಾರ್ಮ್‌ನೊಂದಿಗೆ ಎಂಟ್ರಿ ಕೊಡಲು ಬಿಜೆಪಿ ನಾಯಕರು ಸಜ್ಜಾಗಿದ್ರೆ, ಮೈತ್ರಿ ಧರ್ಮಯುದ್ಧ ಸಾರಲು ಹೆಚ್ ಡಿಕೆ ಅಣಿಯಾಗಿದ್ದಾರೆ.

ಸದ‌ನದಲ್ಲಿ ಡಿಕೆಶಿಯನ್ನು ಟಾರ್ಗೆಟ್ ಮಾಡಲು ಬಿಜೆಪಿ, ಜೆಡಿಎಸ್ ದೋಸ್ತಿಗಳು ಪ್ಲ್ಯಾನ್ ಮಾಡಿದ್ದಾರೆ. ಡಿಕೆಶಿ ವಿರುದ್ಧ ಸಿಬಿಐ ತನಿಖೆಯನ್ನು ಹಿಂಪಡೆದುಕೊಂಡಿರೋದನ್ನೇ ಪ್ರಬಲ ಅಸ್ತ್ರವಾಗಿ ಪ್ರಯೋಗಿಸಲು ಹೊರಟಿದ್ದಾರೆ. ಈ ಬಗ್ಗೆ ಮೊನ್ನೆ ಹೆಚ್‌ಡಿಕೆ ಹಾಗೂ ಆರ್.ಅಶೋಕ್ ಕೂಡ ಗಂಭೀರ ಚರ್ಚೆ ನಡೆಸಿದ್ದು, ಸದನದಲ್ಲಿ ಒಕ್ಕಲಿಗ ನಾಯಕರ ನಡುವೆ ಮಹಾಯುದ್ಧವೇ ನಡೆಯುವ ಸಾಧ್ಯತೆ ಇದೆ.

 

Exit mobile version