Site icon PowerTV

ಗ್ರಾಮ ಪಂಚಾಯತಿ ಪ್ರಭಾರ ಪಿಡಿಓ ನೇಣಿಗೆ ಶರಣು

ಉತ್ತರ ಕನ್ನಡ : ಗ್ರಾಮ ಪಂಚಾಯತಿ ನೌಕರ (ಪ್ರಭಾರ ಪಿಡಿಓ) ನೇಣಿಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ನಡೆದಿದೆ.

ಸನವಳ್ಳಿ ಗ್ರಾಮದ ರಾಮಲಿಂಗ ಶಿವಲಿಂಗಪ್ಪ ಕಳಸಗೇರಿ (39) ಎಂಬುವವರೇ ನೇಣಿಗೆ ಶರಣಾಗಿರುವ ವ್ಯಕ್ತಿ. ತಮ್ಮದೇ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ರಾಮಲಿಂಗ ಶಿವಲಿಂಗಪ್ಪ ಕಳಸಗೇರಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೊನ್ನತ್ತಿ ಗ್ರಾಮ ಪಂಚಾಯತಿಯ ಪ್ರಭಾರ ಪಿಡಿಓ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಭಾನುವಾರ ರಜೆ ಇದ್ದ ಕಾರಣ ಸ್ವಗ್ರಾಮಕ್ಕೆ ಬಂದಿದ್ದರು. ಆದ್ರೆ, ಇಂದು ಏಕಾಏಕಿ ತೋಟದಲ್ಲೇ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

Exit mobile version