Site icon PowerTV

ಅಂಬೇಡ್ಕರ್ ಭಾವಚಿತ್ರದ ಮೇಲೆ ಕಾಲಿಟ್ಟ ಯುವಕನ ಮೇಲೆ ಎಫ್ಐಆರ್

ಯಾದಗಿರಿ : ಅಂಬೇಡ್ಕರ್ ಭಾವಚಿತ್ರದ ಮೇಲೆ ಕಾಲಿಟ್ಟು ಯುವಕನೊರ್ವ ದರ್ಪ ಮೆರೆದಿರುವಂತಹ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ನಡೆದಿದೆ.

ಯಮನಪ್ಪ ತಂದೆ ಗೊಲ್ಳಾಳಪ್ಪ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದು, ಅಂಬೇಡ್ಕರ್ ಅಭಿಮಾನಿಗಳನ್ನ ಕೆರಳಿಸಿದೆ.

ಶಾಂತಿಯುತ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಇಂತಹ ಕಿಡಿಗೇಡಿಗಳನ್ನ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜು ತಂದೆ ಬಸಪ್ಪ ನಾಗರೆಡ್ಡಿ ದೂರು ದಾಖಲಿಸಿದ್ದಾರೆ. ಇನ್ನೂ ಕೆಂಭಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

Exit mobile version