Site icon PowerTV

ಬಿಜೆಪಿ ಗೆಲುವು : ನಿಜವಾಯ್ತು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ

ಬೆಂಗಳೂರು: ಈ ಬಾರಿಯ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲವು ಸಾಧಿಸಲಿದೆ ಎಂದು ಐದು ತಿಂಗಳ ಮೊದಲೇ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಅವರು ನುಡಿದಂತೆ ಈ ಮೂರು ರಾಜ್ಯದಲ್ಲಿ ಮ್ಯಾಜಿಕ್​ ನಂಬರ್​ ಮೀರಿ ಕೇಸರಿಪಡೆಗೆ ಫಲಿತಾಂಶ ಬಂದಿದ್ದು, ಅವರ ಮೇಲಿರುವ ನಂಬಿಕೆಗೆ ಮತ್ತಷ್ಟು ಬಲ ಬಂದಿದೆ.

ಬಿಜೆಪಿ ಮಧ್ಯಪ್ರದೇಶದಲ್ಲಿ ಗದ್ದುಗೆ ಏರುವುದು ಗ್ಯಾರಂಟಿ

ಬಿಜೆಪಿ ಸ್ವಲ್ಪ ಎಚ್ಚುತ್ತುಕೊಂಡರೆ ಮಧ್ಯಪ್ರದೇಶದಲ್ಲಿ ತಮ್ಮ ಗೆಲುವಿನ  ಗದ್ದುಗೆಯೇರಬಹುದು ಎಂದು ಐದು ತಿಂಗಳ ಮುಂಚಿತವಾಗಿಯೇ ಮಧ್ಯಪ್ರದೇಶದ ಚುನಾವಣಾ ಫಲಿತಾಂಶವನ್ನ ತಮ್ಮ ಕಾಲಜ್ಞಾನದ ಭವಿಷ್ಯಮಣಿಯನ್ನು ಪ್ರಕಟಿಸಿದ್ದರು. ಅದರಂತೆ ಎಚ್ಚುತ್ತುಕೊಂಡು ಬಿಜೆಪಿ ಇದು ಬಹುಮತದಿಂದ ಗೆದ್ದಿದ್ದಾರೆ. ಇದರಿಂದ ಮತ್ತೆ ಶ್ರೀಗಳು ಜ್ಯೋತಿಷ್ಯವೆಂಬುವುದು ವಿಜ್ಞಾನ ಎಂದು ಸಾಬೀತು ಮಾಡಿದ್ಧಾರೆ.

ರಾಜಸ್ಥಾನದ ಚುನಾವಣೆ ಫಲಿತಾಂಶದ ಭವಿಷ್ಯ 

ಕಾಂಗ್ರೆಸ್ ಸರ್ಕಾರವು ಜನರ ಸೇವನೆಯನ್ನು ನಿಸ್ವಾರ್ಥದಿಂದ ಮಾಡಿ ಜನರ ಮನಸ್ಸನ್ನು ಗೆದ್ದರೆ  ಚುನಾವಣೆಯನ್ನು ಗೆಲ್ಲಬಹುದು.ಇಲ್ಲವಾದರೆ ಬಿಜೆಪಿ ಪಾಲಾಗಿ ಗೆಲವಿನ ಹಾದಿಯಾಗುತ್ತದೆ. ಏಕೆಂದರೆ ಕಾಂಗ್ರೆಸ್​ನಲ್ಲಿರುವ ಹಲವಾರು ಗೊಂದಲಗಳಿಂದ ಹಿನ್ನಡೆಯಾಗಬಹುದು. ಇದರಿಂದ ರಾಜಸ್ಥಾನ ಬಿಜೆಪಿಯ ಗೆಲವಿನ ಮಂತ್ರವಾಗಿ ಅವರ ಪಾಲಾಗುತ್ತದೆ. ಇದು ಕಾಂಗ್ರೆಸ್​ಗೆ ಎಚ್ಚರಿಕೆಯ ಗಂಟೆಯಾಗುತ್ತದೆ ಎಂದು ತಿಳಿಸಿದ್ದರು. ಆದ್ರೆ ಅದು ಇದು ನಿಜವಾಗಿ ಇಂದು ಬಿಜೆಪಿ ರಾಜಸ್ಥಾನದಲ್ಲಿ ಗೆಲವು ಸಾಧಿಸಿದೆ.

ಈಗಾಗಲೇ ಶ್ರೀಗಳು ನುಡಿದ ರಾಜಕೀಯದ ಬಗ್ಗೆ ನುಡಿದ ಎಷ್ಟೋ ಭವಿಷ್ಯಗಳು ನಿಜವಾಗಿವೆ.

Exit mobile version