Site icon PowerTV

ಇದು ನಮ್ಮ ಪಕ್ಷದ ಗೆಲುವು ಅಲ್ಲ, ತೆಲಂಗಾಣ ಜನತೆಯ ಗೆಲುವು : ಡಿ.ಕೆ.ಶಿವಕುಮಾರ್ 

ಹೈದರಾಬಾದ್: ಪಂಚರಾಜ್ಯದ ಚುನಾವಣೆಯಲ್ಲಿ ತೆಲಂಗಾಣ  ಕಾಂಗ್ರೆಸ್ ಮುನ್ನಡೆಯಲ್ಲಿ ಸಾಗುತ್ತಿರುವುದು  ಸಂತಸದ ವಿಚಾರ. ಇಂದು ನಮ್ಮ ಪಕ್ಷದ ಗೆಲುವು ಅಲ್ಲ, ತೆಲಂಗಾಣದ ಜನತೆಯ ಗೆಲವು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. 

ತೆಲಂಗಾಣದಲ್ಲಿ ಮತದಾರರು ಬದಲಾವಣೆ ಬಯಸಿದ್ದಾರೆ. ಅನೇಕ ರಾಜ್ಯಗಳಿಂದ ನಾಯಕರು ಬಂದು ನಮ್ಮ ಶಾಸಕರನ್ನು ಕರೆದುಕೊಂಡು ಬರುವ ಕೆಲಸ ಮಾಡಿದ್ದಾರೆ. ತೆಲಂಗಾಣದ ಜನರು ಪ್ರತ್ಯೇಕ ರಾಜ್ಯ ಕೊಟ್ಟಿದ್ದಕ್ಕೆ ಗೆಲ್ಲಿಸಿದ್ದಾರೆ. ಸೋನಿಯಾ ಗಾಂಧಿಗೆ ಕೃತಜ್ಞತೆಯಾಗಿ ಕಾಂಗ್ರೆಸ್​ ಗೆಲ್ಲಿಸಿದ್ದಾರೆ ಎಂದು ​ಹೇಳಿದ್ದಾರೆ.

 

Exit mobile version