Site icon PowerTV

ಕಾಂಗ್ರೆಸ್‌ ಗ್ಯಾರಂಟಿಗಳು ಠುಸ್ ಪಟಾಕಿ ಆಗಿದೆ : ಆರ್.‌ ಅಶೋಕ್‌ ವ್ಯಂಗ್ಯ 

ಬೆಂಗಳೂರು: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳು ಠುಸ್‌ ಪಟಾಕಿ ಆಗಿದೆ, ಯಾವುದೇ ಪರಿಣಾಮ ಬೀರಿಲ್ಲ. ಅಲ್ಲಿ ಮೋದಿ ಅವರ ಪ್ರಭಾವ ಎದ್ದು ಕಾಣುತ್ತಿದೆ ಎಂದು ವಿರೋಧ ಪಕ್ಷ ನಾಯಕ ಆರ್‌. ಅಶೋಕ್‌  ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದಲ್ಲಿ ಮಧ್ಯಪ್ರದೇಶ, ರಾಜಸ್ಥಾನ,

ತೆಲಂಗಾಣದಲ್ಲೂ ಬಿಜೆಪಿಗೆ 11 ಸ್ಥಾನ ಈಗ ಬಂದಿದೆ. ಎಲ್ಲ ಕಡೆ ಬಿಜೆಪಿ ತನ್ನ ಸ್ಥಾನ ಹೆಚ್ಚಿಸಿಕೊಳ್ಳುತ್ತಿದೆ. ಮೋದಿಯವರ ಪ್ರಭಾವ ಎಲ್ಲ ಕಡೆ ಕಾಣ್ತಿದೆ. ಛತ್ತಿಸ್‌ಗಢದಲ್ಲೂ ಬಿಜೆಪಿ ಗೆಲ್ಲುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನವರು ರೆಸಾರ್ಟ್‌ ರಾಜಕಾರಣ ಮಾಡಲು ಹೊರಟಿದೆ. ದೊಡ್ಡ ಶೋ ಕೊಡಲು ಡಿಕೆಶಿ ತೆಲಂಗಾಣಕ್ಕೆ ಹೋಗಿದ್ದಾರೆ. ಜನರ ಕಷ್ಟ ಮರೆತು ತೆಲಂಗಾಣ ಶಾಸಕರಿಗಾಗಿ ಡಿಕೆಶಿ ಹೋಗಿದ್ದಾರೆ, ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದ್ದಾರೆ

 

 

Exit mobile version