Site icon PowerTV

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಭವಿಷ್ಯವಿಲ್ಲ : ಸಂಸದ ಮುನಿಸ್ವಾಮಿ ಭವಿಷ್ಯ

ಕೋಲಾರ: ಕಾಂಗ್ರೆಸ್ ಪಕ್ಷಕ್ಕೆ ತೆಲಂಗಾಣದಲ್ಲಿ ಬಹುಮತ ಬಂದಿದ್ದರೂ ಅವರ ಒಳಜಗಳದಿಂದ ಬಹಳ ದಿನ ಸರ್ಕಾರ ನಡೆಯೋದಿಲ್ಲ ಎಂದು ಸಂಸದ ಮುನಿಸ್ವಾಮಿ ಭವಿಷ್ಯವನ್ನು ನುಡಿದಿದ್ಧಾರೆ.

ನಗರದಲ್ಲಿ ಮಾತನಾಡಿದ ಅವರು, ಪಂಚರಾಜ್ಯ ಚುನಾವಣಾ ಫಲಿತಾಂಶದಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇನ್ನೂ ಕಾಂಗ್ರೆಸ್​ನಲ್ಲಿ ಬಹುಮತ ಬಂದರೂ ತೆಲಂಗಾಣದಲ್ಲಿ ರೇವಂತ್ ರೆಡ್ಡಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬಾರದು ಎಂದು ಕಿತ್ತಾಟ ಶುರುವಾಗಿದೆ.

ಕಾಂಗ್ರೆಸ್‍ನಲ್ಲಿನ ಗುಂಪುಗಾರಿಕೆಯಿಂದ ಸರ್ಕಾರ ಹೆಚ್ಚು ಕಾಲ ಉಳಿಯುವುದಿಲ್ಲ. ಚುನಾವಣೆ ವೇಳೆ ಜಮೀರ್ ಅಹ್ಮದ್ ಅವರನ್ನು ಕರೆದುಕೊಂಡು ಬಟ್ಟೆಗಳಿಂದ ಮಂತ್ರಗಳನ್ನು ಹಾಕಿಸಿದ್ದು ನಾನು ನೋಡಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: Telangana Assembly Election Result : KCR ಕೋಟೆಯಲ್ಲಿ ‘ಕೈ’ ಕಮಾಲ್‌ 

ಅವರಲ್ಲಿಯೇ ಸುಮಾರು ಎಪ್ಪತ್ತಾರು ಗುಂಪುಗಳಿವೆ. ಇನ್ನೂ ರಾಜಸ್ಥಾನ ಹಾಗೂ ಛತ್ತೀಸ್‍ಗಢ ಕಾಂಗ್ರೆಸ್‍ನಲ್ಲೂ ಎ,ಬಿ,ಸಿ ಟೀಂಗಳು ಇವೆ. ಅವರ ಪಕ್ಷ ಎಷ್ಟೇ ಗ್ಯಾರಂಟಿ ಕೊಟ್ಟರು, ಅದೆಲ್ಲವನ್ನ ಬಿಟ್ಟು ದೇಶಕ್ಕೆ ಮೋದಿ ಒಬ್ಬರೇ ಗ್ಯಾರಂಟಿ ಎಂದು ಜನ ಬಿಜೆಪಿ ಬೆಂಬಲಿಸಿದ್ದಾರೆ ಎಂದಿದ್ದಾರೆ.

 

 

 

Exit mobile version