Site icon PowerTV

ವ್ಯಕ್ತಿಯನ್ನ ಬರ್ಬರವಾಗಿ ಕೊಂದು ರಸ್ತೆಗೆ ಬೀಸಾಕಿದ ಕಿಡಿಗೇಡಿಗಳು!

ವಿಜಯಪುರ: ವಿಜಯಪುರ ನಗರದ ಕೆಎಚ್‌‌ಬಿ ಕಾಲೋನಿಯಲ್ಲಿ ಅಪರಿಚಿತ ವ್ಯಕ್ತಿಯನ್ನು ತುಂಡು ತುಂಡಾಗಿ ಕತ್ತರಿಸಿ ಹತ್ಯೆ ಮಾಡಲಾಗಿದೆ.

ರಸ್ತೆಯಲ್ಲಿ ತುಂಡಾಗಿ ಬಿದ್ದಿದ್ದ ಮೃತದೇಹವನ್ನು ಕಂಡು ಸ್ಥಳೀಯರು ದಂಗಾಗಿ, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಲನಗರ ಪಿಎಸ್‌ಐ ಮತ್ತು ಡಿವೈಎಸ್‌ಪಿ ಯಲಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವ್ಯಕ್ತಿಯ ಹೆಸರು ಹಾಗೂ ಮಾಹಿತಿ ಲಭ್ಯವಾಗಿಲ್ಲ. ಹೋಂ ಗಾರ್ಡ್ ಬಟ್ಟೆಯಲ್ಲಿ ತುಂಡಾಗಿ ಬಿದ್ದಿರುವ ಶವ ಪತ್ತೆಯಾಗಿದೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

 

 

Exit mobile version