Site icon PowerTV

ಇಂದಿನಿಂದ ಪ್ರೋ ಕಬಡ್ಡಿ ಸೀಸನ್​ 10 ಆರಂಭ!

ಅಹಮದಾಬಾದ್: ಬಹುನಿರೀಕ್ಷಿತ 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್)ಗೆ ಅಹಮದಾಬಾದ್‌ನಲ್ಲಿ ಇಂದು ಚಾಲನೆ ಸಿಗಲಿದೆ.

ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ತೆಲುಗು ಟೈಟಾನ್ಸ್ ಮುಖಾಮುಖಿಯಾಗಲಿವೆ. ಇದೇ ದಿನದಂದು ಮತ್ತೊಂದು ಪಂದ್ಯದಲ್ಲಿ ಯುಮುಂಬಾ ಹಾಗೂ ಯುಪಿ ಯೋಧಾಸ್ ತಂಡಗಳು ಶುಭಾರಂಭ ಮಾಡಲು ಸೆಣಸಾಡಲಿವೆ.)

ಇದನ್ನೂ ಓದಿ: ಸಲಾರ್ ರಿವ್ಯೂ​ಗಳ ಮಧ್ಯೆ ವೀವ್ಸ್ ರೆಕಾರ್ಡ್​: 13 ಗಂಟೆಯಲ್ಲಿ 4 ಕೋಟಿ ವೀವ್ಸ್​!

ಕೋವಿಡ್ ಬಳಿಕ ಈ ಬಾರಿ ಟೂರ್ನಿ ಮತ್ತೆ ಹಳೆಯ ಮಾದರಿಯಲ್ಲಿ ನಡೆಯಲಿದ್ದು, ಈ ಲೀಗ್​ನಲ್ಲಿ 12ನಗರಗಳು ಆತಿಥ್ಯ ವಹಿಸಲಿವೆ. ಸದ್ಯ ಅಹಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿದ್ದು, 2ನೇ ವಾರ ಅಂದರೆ ಡಿ.8 ರಿಂದ 13ರ ವರೆಗೆ ಬೆಂಗಳೂರಿನಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ. ಬಳಿಕ ಪುಣೆ, ಚೆನ್ನೈ , ನೋಯ್ಡಾ, ಜೈಪುರ, ಹೈದರಾಬಾದ್, ಡೆಲ್ಲಿ, ಕೋಲ್ಕತಾ ಟೂರ್ನಿಗೆ ಆತಿಥ್ಯ ವಹಿಸಲಿದೆ.

Exit mobile version