Site icon PowerTV

Bigg Boss Kannada: ಕಿಚ್ಚನ ಪಂಚಾಯಿತಿ ; ಈ ವಾರ ಮನೆಯಿಂದ ಹೊರಕ್ಕೆ ಹೋಗುವವರು ಯಾರು?

ಬೆಂಗಳೂರು: ಈ ವಾರ ಆಟದ ಮುಗಿತ್ತು ಇನ್ನೂ ನಾಮಿನೇಷನ್ ಇದೆ.ಇಂದುದೊಡ್ಮನೆಯಿಂದ ಯಾರಿಗೆ ಗೇಟ್ ಪಾಸ್​ ಸಿಗುತ್ತದೆ ಎಲ್ಲಾವೂ ಕಿಚ್ಚನ ಪಂಚಾಯಿತಿಯಲ್ಲಿ ನಿರ್ಧಾರವಾಗುತ್ತದೆ.

ದಿನದಿಂದ ದಿನಕ್ಕೆ ದೊಡ್ಡನೆಯಲ್ಲಿ ಆಟಗಾರರ ಮಧ್ಯೆ ಬಿರುಕು ಮೂಡುತ್ತಿದೆ. ಟಾಸ್ಟ್‌ಗಳಲ್ಲಿ ಉಂಟಾದ ವೈಮನಸ್ಸು ಮನೆಯ ಇತರ ಚಟುವಟಿಕೆಗಳಲ್ಲಿಯೂ ಮುಂದುವರೆಯುತ್ತಿದೆ. ಕಳಪೆ ಹಾಗೂ ಉತ್ತಮ ಆಟಗಾರರ ಮಧ್ಯೆ ಮನೆಯಲ್ಲಿ ಉಳಿದುಕೊಳ್ಳುವುದು ಯಾರು ಎಂಬ ಚಿಂತೆ ಸ್ಪರ್ಧಿಗಳಲ್ಲಿ ಕಾಡುತ್ತಿದೆ.

ಇನ್ನೂ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ಪವಿ ಪೂವಪ್ಪ ಹಾಗೂ ಅವಿನಾಶ್ ಅವರು ಹೊರಗಡೆಯಿಂದ ತಾವು ನೋಡಿದ ಸ್ವರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.ಇದಕ್ಕೆ ಮನೆಯಲ್ಲಿ ಪರ ವಿರೋಧ ಚರ್ಚೆಗಳು ನಡೆದವು.

ಈ ವಾರದ ಕಳಪೆ ಪ್ರದರ್ಶನ ಪ್ರತಾಪ್‌ಗೆ ಸಿಕ್ಕಿದೆ ಹಾಗೂ ಉತ್ತಮ ಆಟಗಾರರ ಪ್ರಶಸ್ತಿ ನಮ್ರತಾಗೆ ಸಿಕ್ಕಿದೆ.

ಈ ವಾರದ ನಾಮಿನೇಷನ್​ನಲ್ಲಿ ಯಾರೆಲ್ಲಾ ಹೆಸರುಗಳಿವೆ

ವರ್ತೂರ್ ಸಂತೋಷ್, ಸ್ನೇಹಿತ್, ಪ್ರತಾಪ್, ತನಿಷಾ, ವಿನಯ್, ನಮ್ರತಾ ಗೌಡ, ಮೈಕಲ್ ಹಾಗೂ ಸಂಗೀತಾ ಶೃಂಗೇರಿ ಈ ವಾರ ನಾಮಿನೇಷನ್‌ಲ್ಲಿ ಇರುವ ಸ್ಪರ್ಧಿಗಳು ಸ್ಪರ್ಧಿಗಳ ನಡುವೆ ಆಟದ ಕಾವು ಹೆಚ್ಚಾಗುತ್ತಿದಂತೆ ಮನೆಯಿಂದ ಯಾರೂ ಹೊರಗೆ ಬರುತ್ತಾರೆಂಬ ಕುತೂಹಲವು ಅಭಿಮಾನಿಗಳಲ್ಲಿ ಮೂಡಿದೆ.

 

Exit mobile version