ಬೆಂಗಳೂರು: 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಸಾಧನೆ ಆಧರಿಸಿ ವರ್ಗ ಅಥವಾ ಅತ್ಯುನ್ನತ ಶ್ರೇಣಿ ನೀಡುವ ಕ್ರಮವನ್ನು ಕೈ ಬಿಡಲು ಕೇಂದ್ರ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು CBSE ತೀರ್ಮಾನಿಸಿದೆ.
CBSE ಪರೀಕ್ಷಾ ನಿಯಂತ್ರಣಾಧಿಕಾರಿ ಸನ್ಯಾಮ್ ಭಾರಧ್ವಾಜ್ ನೀಡಿದ ಹೇಳಿಕೆಯಲ್ಲಿ ದೃಢಪಡಿಸಿದ್ದಾರೆ.
ಮಂಡಳಿಯು ಇನ್ನು ಮುಂದೆ ಅಂಕಗಳ ಶೇಕಡವಾರು ಲೆಕ್ಕ ಹಾಕುವುದಿಲ್ಲ, ಪ್ರಕಟಿಸುವುದಿಲ್ಲ, ತಿಳಿಸುವುದಿಲ್ಲ. ಉನ್ನತ ಶಿಕ್ಷಣ ಅಥವಾ ಉದ್ಯೋಗ ನೇಮಕಾತಿಗೆ ಇದರ ಅಗತ್ಯವಿದ್ದಲ್ಲಿ ಪ್ರವೇಶ ನೀಡುವ ಶಿಕ್ಷಣ ಸಂಸ್ಥೆ ಅಥವಾ ಉದ್ಯೋಗದಾತರೇ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಜಿಎಸ್ಟಿ ಸಂಗ್ರಹ ಕರ್ನಾಟಕ ನಂಬರ್ 2!
ಅಂಕಗಳ ಕ್ರೋಡೀಕರಣ, ಪ್ರಮಾಣವನ್ನು ನಿಗದಿಪಡಿಸಲು ಮಂಡಳಿಯು ಅನುಸರಿಸುವ ಅಳತೆಗೋಲು ಕುರಿತಂತೆ ಹಲವು ವಿದ್ಯಾರ್ಥಿಗಳು ಮಂಡಳಿಗೆ ವಿವರ ಕೇಳಿದ್ದರು ಎಂದೂ ಅವರು ಈ ಕುರಿತ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಮಂಡಳಿಯ ಪರೀಕ್ಷಾ ಬೈ–ಲಾದ ಅಧ್ಯಾಯ 7ರ ಉಪವರ್ಗ 40.1ರ ಅನುಸಾರ ಇನ್ನು ಮುಂದೆ ಒಟ್ಟಾರೆ ಅಂಕಗಳ ಆಧಾರದಲ್ಲಿ ವರ್ಗ, ಅತ್ಯುನ್ನತ ಶ್ರೇಣಿ ಅಥವಾ ಸರಾಸರಿ ಅಂಕಗಳ ವಿವರಗಳನ್ನು ನೀಡಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.



Сложные термины могут быть понятными, если объяснить их правильно.
Для тех, кто ищет информацию по теме “Объясняем сложные термины простым языком”, нашел много полезного.
Вот, делюсь ссылкой:
[url=https://easyterm.ru]https://easyterm.ru[/url]
Теперь сложные термины больше не задают вопросы, а радуют пониманием.