Site icon PowerTV

ನಾಲ್ಕು ರಾಜ್ಯಗಳಲ್ಲಿ ಅಧಿಕಾರಕ್ಕೆ ಬರ್ತೀವಿ: AICC ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ

ಬೆಂಗಳೂರು: ನಾಳಿನ ನಾಲ್ಕುರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ‌ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಎಲ್ಲ ರಾಜ್ಯಗಳಲ್ಲೂ ಚುನಾವಣೆ ಚೆನ್ನಾಗಿ ಆಗಿದೆ. ನಮಗೆ ಬಂದಿರುವ ಫೀಡ್ ಬ್ಯಾಕ್ ಪ್ರಕಾರ ನಮಗೆ ನಾಲ್ಕು ರಾಜ್ಯಗಳಲ್ಲಿ ಜಯ ಸಿಗುತ್ತೆ. ಮಿಜೋರಾಂನಲ್ಲಿ ಅತಂತ್ರ ಆಗಬಹುದು. ಅದಕ್ಕಾಗಿ ನಾವು ಏನು ಊಹಿಸಿದ್ದೇವೋ ಅದರಂತೆ ಫಲಿತಾಂಶ ಬರಲಿದೆ.

ಇದನ್ನೂ ಓದಿ: ತೆಲಂಗಾಣ ಚುನಾವಣೆ ಫಲಿತಾಂಶ ಅತಂತ್ರ! : ಶಾಸಕರಿಗೆ ಬಲೆ ಬೀಸಲು ಜಮೀರ್​ ಗೆ ಟಾಸ್ಕ್​!

ನಮಗೆ ಬಹುಮತ ಬರಲಿದೆ. ಆಯಾ ರಾಜ್ಯಗಳ ನಾಯಕರ ಜತೆ ಮಾತಾಡಿದ್ದೇನೆ. ಕಮಲ್ ನಾಥ್ ಜತೆಗೆ ಮಾತಾಡಿದ್ದೇನೆ, ಝೂಮ್ ಸಭೆಗಳನ್ನು ಮಾಡಿದ್ದೇವೆ. ಎಲ್ಲ ಕಡೆಯೂ ನಮಗೆ ಬಹುಮತ ಬರುತ್ತೆ ಎಂದು ಹೇಳಿದ್ದಾರೆ.

Exit mobile version