Site icon PowerTV

ಮಹದೇಶ್ವರ ಬೆಟ್ಟ : ಲಾಡು ತಯಾರಿಕಾ ಕೇಂದ್ರದಲ್ಲಿ ಬೆಂಕಿ ಆಕಸ್ಮಿಕ

ಚಾಮರಾಜನಗರ : ಮಹದೇಶ್ವರ ಬೆಟ್ಟದ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯದ ಲಾಡು ತಯಾರಿಕಾ ಕೇಂದ್ರದಲ್ಲಿ ಶುಕ್ರವಾರ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಕಟ್ಟಡ ಹೊತ್ತಿ ಉರಿಯುತ್ತಿದೆ. ಅದೃಷ್ಟವಶಾತ್ ಜೀವ ಹಾನಿಯಾಗಿಲ್ಲ.

ಸಿಲಿಂಡರ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಲಾಡು ಪ್ರಸಾದ ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗನೇ ಹೊತ್ತಿ ಉರಿದಿದೆ. ಲಾಡು ಪ್ರಸಾದ ತಯಾರು ಘಟಕದಲ್ಲಿ ಸಿಹಿ ಜಿಡ್ಡು ಹಾಗೂ ಎಣ್ಣೆ ಪದಾರ್ಥಗಳಿಗೆ ಬೆಂಕಿ ತಗುಲಿದೆ. ಘಟಕದಲ್ಲಿ ಜಿಡ್ಡು ಹಾಗೂ ಎಣ್ಣೆ ಇದ್ದ ಕಾರಣ ಬೆಂಕಿ ಒಮ್ಮೆಲೆ ಹಬ್ಬಿದೆ.

ನೋಡನೋಡುತ್ತಿದ್ದಂತೆ ಲಾಡು ಪ್ರಸಾದದ ಗೋದಾಮು ಸುಟ್ಟು ಕರಕಲಾಗಿದೆ. ಬೆಂಕಿ ನಂದಿಸಲು ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರದ ಸಿಬ್ಬಂದಿ ಹರಸಾಹಸ ಪಟ್ಟರು. ಲಾಡು ಪ್ರಸಾದದ ಗೋದಾಮು ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗುತ್ತಿದ್ದ ಹೊತ್ತಲ್ಲಿ ಸಿಬ್ಬಂದಿ ಯಾರೂ ಇರಲಿಲ್ಲ. ಹೀಗಾಗಿ ನಡೆಯಬಹುದಾದ ಅನಾಹುತವೊಂದು ತಪ್ಪಿದೆ. ಸದ್ಯ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.

Exit mobile version