Site icon PowerTV

ಬಾಂಬ್​ ಬೆದರಿಕೆ: ಸಮಗ್ರ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶ 

ಬೆಂಗಳೂರು: ರಾಜಧಾನಿಯ 30ಕ್ಕೂ ಅಧಿಕ ಶಾಲೆಗಳಿಗೆ Kharijjitas@bebble.com ಎಂಬ ಮೇಲ್‌ ಐಡಿಯಿಂದ ಬಂದಿರುವ ಉಗ್ರರ ಬೆದರಿಕೆ ಪತ್ರದ  ಬಗ್ಗೆ ಸಮಗ್ರ ತನಿಖೆಗೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.

ಈ ಘಟನೆಯ ಬಗ್ಗೆ ಪೊಲೀಸ್‌ ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಮಾತನಾಡಿದ ಅವರು, ಪೊಲೀಸರು ಪ್ರಾಥಮಿಕ ವರದಿ ಕೊಟ್ಟಿದ್ದಾರೆ. ಯಾರು ಆ ರೀತಿ ಮಾಡಿದ್ದಾರೆ ಎಂಬ ಬಗ್ಗೆ ತನಿಖೆಗೆ ಸೂಚಿಸಿದ್ದೇನೆ. ಈ ರೀತಿ ಯಾರೂ ಕೂಡ ಮಾಡಬಾರದುʼʼ ಎಂದು ಹೇಳಿದರು.

ಇದನ್ನೂ ಓದಿ: ಬಾಂಬ್​ ಬೆದರಿಕೆ: CIDಗೆ ಸಚಿವ ಜಿ.ಪರಮೇಶ್ವರ್‌ ಆದೇಶ 

ಪೋಷಕರು ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಎಲ್ಲ ಶಾಲೆಗಳಿಗೂ ಬಿಗಿ ಭದ್ರತೆ ಒದಗಿಸಲು ಸೂಚಿಸಿದ್ದೇನೆ ಎಂದರು.

ದೇವಸ್ಥಾನಗಳಿಗೂ ಬಾಂಬ್ ಹಾಕುವ ಬೆದರಿಕೆ ಹಾಕಲಾಗಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿದಾಗ, ಬಾಂಬ್ ಬೆದರಿಕೆ ಬಗ್ಗೆ ತನಿಖೆ ಮಾಡೋಕೆ ಪೊಲೀಸ್ ಇಲಾಖೆಗೆ ಹೇಳಿದ್ದೇನೆ. ಎಲ್ಲಿಂದ ಬಂತು, ಏನು ಬಂತು ಅಂತ ಮಾಡುತ್ತಾರೆ ಎಂದರು. ಬೆದರಿಕೆ ಪತ್ರದ ಬಗ್ಗೆ ಸಂಪೂರ್ಣ ವಿವರ ಸಂಗ್ರಹಿಸುವುದಾಗಿ ತಿಳಿಸಿದರು.

 ಏನಿದು ಬಾಂಬ್ ಬೆದರಿಕೆ

ಬೆಳಗ್ಗೆ ಶಾಲೆಗಳು ತೆರೆದುಕೊಳ್ಳುತ್ತಿದ್ದಂತೆಯೇ ಈ ಮೇಲ್‌ ಪತ್ರ ಬಂದಿರುವುದು ಗೊತ್ತಾಗಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಪತ್ರದಲ್ಲಿ ಉಲ್ಲೇಖ ಮಾಡಿರುವ ಮಾದರಿಯಲ್ಲಿ ಯಾವುದೇ ಅಪಾಯಕಾರಿ ಅಥವಾ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಆತಂಕ ಕಡಿಮೆಯಾಯಿತಾದರೂ ಪತ್ರದಲ್ಲಿರುವ ಬರೆದಿರುವ ಅಂಶಗಳು ಭಯ ಹುಟ್ಟಿಸುವಂತಿವೆ.

 

 

Exit mobile version