Site icon PowerTV

ವಾಹನ ಡಿಕ್ಕಿ ಹೊಡೆದು 3 ವರ್ಷದ ಗಂಡು ಚಿರತೆ ಸಾವು

ಮಂಡ್ಯ : ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಚಿರತೆ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬಾಚನಹಳ್ಳಿಯಲ್ಲಿ ನಡೆದಿದೆ.

ನಿನ್ನೆ ಸಂಜೆ ರಸ್ತೆ ದಾಟುವ ವೇಳೆ ಚಿರತೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸ್ಥಳದಲ್ಲೇ ಸುಮಾರು ಮೂರು ವರ್ಷ ವಯೋಮಾನದ ಗಂಡು ಚಿರತೆ ಸಾವನ್ನಪ್ಪಿದೆ. ಹೆದ್ದಾರಿಯಲ್ಲಿ ಚಿರತೆ ಬಿದ್ದಿರುವುದನ್ನ ಕಂಡು ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದಾರೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಬ್ಬಂದಿ ಚಿರತೆ ಸಮೀಪಕ್ಕೆ ಹೋಗಿ ಪರಿಶೀಲಿಸಿದಾಗ ಚಿರತೆ ಮೃತಪಟ್ಟಿರುವುದು ಖಾತರಿಯಾಗಿದೆ. ಚಿರತೆ ಕಳೆಬರಹವನ್ನು ಉಪವಲಯ ಅರಣ್ಯ ಇಲಾಖೆ ಕಚೇರಿ ಆವರಣಕ್ಕೆ ರವಾನೆ ಮಾಡಲಾಯಿತು.

Exit mobile version