Site icon PowerTV

ಲೋಕಸಭಾ ಚುನಾವಣೆಗೆ ಮುಂಚೆ ಡಿಕೆಶಿ ಜೈಲಿಗೆ ಹೋಗೋದು ಫಿಕ್ಸ್: ಕೆ.ಎಸ್.ಈಶ್ವರಪ್ಪ

ಹಾವೇರಿ: ಲೋಕಸಭಾ ಚುನಾವಣೆ ಮುಂಚೆ ಅಥವಾ ಚುನಾವಣೆಯ ಬಳಿಕ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಜೈಲಿಗೆ ಹೋಗೋದು ಫಿಕ್ಸ್ ಎಂದು ಕೆ.ಎಸ್. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ಸಿಬಿಐ ತನಿಖೆ ಮುಂದುವರಿಸಲು ಅಭ್ಯಂತರ ಇಲ್ಲ ಎಂದು ಕೋರ್ಟ್ ಹೇಳಿದೆ. ಮೇಲ್ನೋಟಕ್ಕೆ ಡಿಕೆಶಿ ಅಕ್ರಮ ಹಣ ಸಂಪಾದನೆ ಮಾಡಿರೋದು ಬಹಿರಂಗ ಆಗಿದೆ. ನೂರಾರು ಕೋಟಿ ಹಣ ಸಿಕ್ಕಿರೋದು ಇಡೀ ರಾಜ್ಯದ ಜನ ನೋಡಿದ್ದಾರೆ. ಸಿಬಿಐ ತನಿಖೆ ಆಗಿದೆ, ಅವರು ಜೈಲಿಗೆ ಹೋಗೋದ್ರಲ್ಲಿ ಯಾವುದೇ ಸಂಶಯ ಇಲ್ಲ. ಲೋಕಸಭಾ ಚುನಾವಣೆ ಮುನ್ನ ಅಥವಾ ಚುನಾವಣೆಯ ಬಳಿಕ ಡಿಕೆಶಿ ಜೈಲಿಗೆ ಹೋಗೋದು ಖಚಿತ ಎಂದರು.

ಇದನ್ನೂ ಓದಿ: ಹೊಸದಾಗಿ ರಾಜ್ಯದಲ್ಲಿ188 ಇಂದಿರಾ ಕ್ಯಾಂಟೀನ್‌ ಆರಂಭ : ಸಿಎಂ ಸಿದ್ದರಾಮಯ್ಯ

ಜಾತಿ ಜನ ಗಣತಿ ಕೇಂದ್ರ ಸರ್ಕಾರದ ಕರ್ತವ್ಯ. ಪ್ರಧಾನಿ ಮೋದಿ ಕೂಡಾ ಜಾತಿ ಗಣತಿ ಮಾಡ್ತೀವಿ ಅಂದಿದ್ದಾರೆ. ಬಿಹಾರದಲ್ಲಿ ಈಗಾಗಲೇ ವರದಿ ರಿಲೀಸ್ ಮಾಡಿದರು. ಆದರೆ ಕರ್ನಾಟಕ ರಾಜ್ಯದಲ್ಲಿ ರಿಪೋರ್ಟ್ ರೆಡಿ ಇದ್ರೂ ಬಿಡುಗಡೆ ಆಗಲಿಲ್ಲ ಎಂದು ಸಿಎಂ ಸಿದ್ದರಾಮಯ್ಯನ ವಿರುಧ್ಧ ಕಿಡಿಕಾರಿದ್ದಾರೆ.

 

 

 

Exit mobile version