Site icon PowerTV

ಕಾಂಗ್ರೆಸ್‌ ನಾಯಕ ಗುಂಡುರೆಡ್ಡಿ & ಗ್ಯಾಂಗ್‌ ಬಂಧನ!

ಬೀದರ್​: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕ ಗುಂಡಿ ರೆಡ್ಡಿಯನ್ನ ಪೊಲೀಸರು ಬಂಧಿಸಿದ್ದಾರೆ.

ಬಸವ ಕಲ್ಯಾಣದ ಹನಮಂತವಾಡಿ ಬಳಿ ಆಂಧ್ರಪ್ರದೇಶ ಮೂಲದ ಉಮಾಶಂಕರ ಬಾರದ್ವಾಜ್ ಎಂಬುವವರ ಕಾರಿನಲ್ಲಿದ್ದ 3.5 ಕೋಟಿಯನ್ನ ಗುಂಡಿರೆಡ್ಡಿ ಆ್ಯಂಡ್ ಗ್ಯಾಂಗ್ ದಾಳಿ ಮಾಡಿದ್ದರು. ಹೈದರಾಬಾದ್‌ನಿಂದ ಮಹಾರಾಷ್ಟ್ರದ ಫಂಡರಾಪುರಕ್ಕೆ ತೆರಳುವ ವೇಳೆ ಗಾಳಿಯಲ್ಲಿ ಎರಡು ಗುಂಡು ಹಾರಿಸಿ, ಹಣೆ ಮೇಲೆ ಪಿಸ್ತೂಲ್ ಇಟ್ಟು, ದರೋಡೆ ಮಾಡಿದ್ದ ಗ್ಯಾಂಗ್‌ ಕಾರ್‌ನಲ್ಲಿದ್ದ 3 ಕೋಟಿ 50 ಲಕ್ಷ ದೋಚಿ ಎಸ್ಕೇಪ್‌ ಆಗಿದ್ದರು.

ಇದನ್ನೂ ಓದಿ: ತೆಲಂಗಾಣ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ!

ಈ ಸಂಬಂಧ ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಉಮಾಶಂಕರ್ ಭಾರದ್ವಾಜ್, ಘಟನೆ ನಡೆದ 24 ಗಂಟೆಯಲ್ಲಿ‌ ಪ್ರಕರಣ ಬೇಧಿಸಿದ ಪೊಲೀಸರು. ಆರೋಪಿಗಳಾದ ಗುಂಡಿರೆಡ್ಡಿ, ವಿಜಯಕುಮಾರ್ ರೆಡ್ಡಿ, ಸಂಜಯ್ ರೆಡ್ಡಿ ಬಂಧಿತ ಆರೋಪಿಗಳು, ಆರೋಪಿಗಳಿಂದ 2.62 ಕೋಟಿ ಜಪ್ತಿ ಮಾಡಿದ್ದಾರೆ. ಇನ್ನೋರ್ವ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Exit mobile version