Site icon PowerTV

ಒಂದು ಚುನಾವಣೆ ಗೆಲ್ಲಲು ಒಬ್ಬರ ಜೀವನದ ಜೊತೆಗೆ ಆಟ ಆಡ್ತೀರಾ? : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನ್ಯಾಯಾಲಯ ತಾತ್ಕಾಲಿಕ ರಿಲೀಫ್ ನೀಡಿರುವ ವಿಚಾರ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಒಂದು ಚುನಾವಣೆ ಗೆಲ್ಲಲಿಕ್ಕೆ ಒಬ್ಬರ ಜೀವನದ ಜೊತೆಗೆ ಆಟ ಆಡ್ತೀರಾ? ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿ ಹಾಕಬೇಕು ಅಂತ ಎಷ್ಟು ಬೇಗ ಫೈಲ್ ಮೂವ್ ಮಾಡಿದ್ರಿ? ಎಂದು ಪ್ರಶ್ನಿಸಿದ್ದಾರೆ.

ಕೇವಲ ಮೌಖಿಕ ಆದೇಶ ನೀಡಿ ಸಿಬಿಐಗೆ ನೀಡಿದ್ರಿ. ಇದನ್ನು ರಾಜಕೀಯ ಪ್ರೇರಿತ ಎನ್ನದೇ ಬೇರೆ ಏನು ಹೇಳಬೇಕು? ಅವತ್ತು ಏನೇನೋ ಪೋಸ್ಟ್ ಹಾಕುತ್ತಿದ್ದವರು ಈಗ ಏನು ಉತ್ತರ ಕೊಡ್ತೀರಾ? ಸಿಬಿಐ ಮಾನದಂಡದ ಪ್ರಕಾರ ಅವತ್ತು ಎಫ್ಐಆರ್ ಇತ್ತಾ ಇಲ್ವಾ ಅಷ್ಟೇ ಉತ್ತರ ಹೇಳಲಿ ಬಿಜೆಪಿಯವರು. ಒಂದೇ ತಾಸಿನಲ್ಲಿ ಡಾಕ್ಯುಮೆಂಟ್ ಮೂವ್ ಮಾಡಿದ್ದಾರೆ. ಬಡವರ ಕಣ್ಣೀರು ಒರೆಸುವಾಗ ಮಾತ್ರ ಯಾಕೆ ಇಷ್ಟು ಬೇಗ ಫೈಲ್ ಮೂವ್ ಆಗಲ್ಲ? ಇದಕ್ಕೆ ರಾಜಕೀಯ ಪ್ರೇರಿತ ಅಂದಿದ್ದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Exit mobile version