Site icon PowerTV

60 ಸಾವಿರ ಲಂಚ ಸ್ವೀಕರಿಸುವಾಗ ಅಧಿಕಾರಿ ‘ಲೋಕಾ’ ಬಲೆಗೆ

ಬೆಳಗಾವಿ : ಉಪವಿಭಾಗ ಕಚೇರಿಯ ಎಸ್‌ಡಿಸಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದಿದೆ.

ಮಂಜನಾಥ ಅಂಗಡಿ ಬಲೆಗೆ ಬಿದ್ದ ಅಧಿಕಾರಿ. ರಾಮದುರ್ಗ ತಾಲೂಕಿನ ಚಿಕ್ಕೊಪ್ಪ ಎಸ್‌.ಕೆ. ಗ್ರಾಮದ ರವಿ ಅಜ್ಜಿ ಪಹಣಿ ಪತ್ರ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದರು. ಪಹಣಿ ಪತ್ರದ ತಿದ್ದುಪಡಿಗೆ ಮಂಜುನಾಥ 60 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟಿದ್ದರು.

ಈ ಸಂಬಂಧ ರವಿ ಅಜ್ಜಿ ಬೆಳಗಾವಿ ಲೋಕಾಯುಕ್ತ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಮಂಜುನಾಥ್​​ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ SP ಹಣಮಂತರಾಯ, DYSP ಬಿ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ PSI ಅನ್ನಪೂರ್ಣ ಹುಲಗೂರ ನೇತೃತ್ವದ ತಂಡ ದಾಳಿ ನಡೆಸಿತ್ತು.

Exit mobile version