Site icon PowerTV

ಡಿಕೆಶಿ ಕೇಸ್ ಕಾನೂನು ಪ್ರಕಾರ ಇಲ್ಲ ಎಂದು ವಾಪಸ್ ಪಡೆದಿದ್ದೇವೆ : ಸಿದ್ದರಾಮಯ್ಯ

ಹಾವೇರಿ : ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರಕರಣವನ್ನು ಕಾನೂನು ಪ್ರಕಾರ ಇಲ್ಲವೆಂದು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹಾವೇರಿಯ ಕಾಗಿನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯ ನೀಡಿದ ಆದೇಶದ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ನಾನು ವಕೀಲನಾಗಿರುವುದರಿಂದಲೇ ಹಿಂದಿನ ತನಿಖಾ ಆದೇಶ ಕಾನೂನು ರೀತ್ಯವಿರಲಿಲ್ಲವೆಂದು ವಾಪಸ್ ಪಡೆಯಲಾಗಿದೆ. ನನಗೆ ಕಾನೂನಿನ ಅರಿವು ಇಲ್ಲದಿದ್ದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಹೆಚ್.ಡಿ. ಕುಮಾರಸ್ವಾಮಿಯಂತೆ ನಾನು ಕಾನೂನುಬಾಹಿರವಾಗಿದ್ದರೂ ತನಿಖೆಗೆ ಸಮ್ಮತಿಸುತ್ತಿದ್ದೆ ಎಂದು ಚಾಟಿ ಬೀಸಿದ್ದಾರೆ.

ಬರಗಾಲದ ಬಗ್ಗೆ ಸಭೆ ಮಾಡುವಂತೆ ಡಿಸಿಗಳಿಗೆ ಹೇಳಿದ್ದೇನೆ. ಕುಡಿಯುವ ನೀರು, ಮೇವಿಗೆ ಸಮಸ್ಯೆ ಆಗಬಾರದು. ನೂರೈವತ್ತು ದಿನ‌ ಬರಗಾಲದಲ್ಲಿ ಕೆಲಸ ಕೊಡಬೇಕು. ಇವತ್ತಿನವರೆಗೆ ಕೇಂದ್ರ ಸರಕಾರ ಪರ್ಮಿಶನ್ ಕೊಟ್ಟಿಲ್ಲ. ಕೇಂದ್ರ ತಂಡ ಬಂದು ಹೋಗಿದೆ. ಇದುವರೆಗೂ ನಮಗೆ ಒಂದು ರೂಪಾಯಿ ಕೊಟ್ಟಿಲ್ಲ. ನಿಗಮ ಮಂಡಳಿಗಳನ್ನ ನಾವೆಲ್ಲ ಚರ್ಚೆ ಮಾಡ್ತಿವಿ. ಮೊದಲ ಹಂತದಲ್ಲಿ ಶಾಸಕರಿಗೆ ನಿಗಮ ಮಂಡಳಿ ಕೊಡ್ತಿವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Exit mobile version