Site icon PowerTV

ಲವ್​,ಸೆಕ್ಸ್​ ದೋಖಾ : 6 ವರ್ಷ ಪ್ರೀತಿಸಿ ಕೈಕೊಟ್ಟ ಯುವಕ, ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಶಿವಮೊಗ್ಗ: ಕೀಳು ಜಾತಿಯವಳು ಅಂತಾ ಹೀಯಾಳಿಸಿ ಆರು ವರ್ಷಗಳ ಕಾಲ ಪ್ರೀತಿಸಿ ಯುವಕ ಕೈಕೊಟ್ಟ ಹಿನ್ನೆಲೆ ಮನನೊಂದ ಯುವತಿಯೊಬ್ಬಳು ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೊಸನಗರದ ಮಾರಿಗುಡ್ಡ ಬಡಾವಣೆಯಲ್ಲಿ ನಡೆದಿದೆ. 

ಹೊಸನಗರ ಮೂಲದ ಸುಧಾ (27) ಮತ್ತು ಶ್ರೀಕಾಂತ್ (30) ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ಹೇಳಿ ಆಕೆಯೊಂದಿಗೆ ಶ್ರೀಕಾಂತ್ ದೈಹಿಕ ಸಂಪರ್ಕ ಕೂಡ ನಡೆಸಿದ್ದನು. ಕೊನೆಗೆ ಶ್ರೀಕಾಂತ್ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.

ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ 

ಇದರಿಂದ ಮನನೊಂದು ಸುಧಾ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಸ್ವಸ್ಥ ಯುವತಿಯಲ್ಲಿದ್ದ ಮಗಳನ್ನು ಪೋಷಕರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಆತ್ಮಹತ್ಯೆಗೂ ಮುನ್ನ ಸುಧಾ ಮಾಡಿದ್ದ ವಿಡಿಯೋದಲ್ಲಿ ತನಗೆ ಮೋಸ ಮಾಡಿದ ಯುವಕ ಮತ್ತು ಆತನ ಭಾವನಿಗೆ ಶಿಕ್ಷೆ ವಿಧಿಸಬೇಕು ಎಂದು ಹೇಳಿಕೊಂಡಿದ್ದು, ಯುವನ ವಿರುದ್ಧ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Exit mobile version