Site icon PowerTV

ತಾಯಿಯನ್ನು ಬೈದ ಅಜ್ಜನಿಗೆ ಚಾಕು ಇರಿದು ಕೊಂದ ಮೊಮ್ಮಗ!

ಕಲಬುರಗಿ: ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ತನ್ನ ಅಜ್ಜನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಕುಮಿಸಿ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಜವಳಗಾಬಿ ಗ್ರಾಮದ ನಿವಾಸಿ ಸಿದ್ರಾಮಪ್ಪ ಕಾಮನ್​ (75) ವರ್ಷ, ಚಾಕು ಇರಿತಕ್ಕೊಳಗಾಗಿ ಸಾವಿಗೀಡಾದ ವ್ಯಕ್ತಿ, ಆಕಾಶ್​ ಕಾಮನ್​ ಅಜ್ಜನನ್ನು ಕೊಲೆಮಾಡಿದ ಮೊಮ್ಮಗ.

ಇದನ್ನೂ ಓದಿ: ಕಬ್ಬಿಣದ ಗ್ರಿಲ್​ ನಲ್ಲಿ ಸಿಲುಕಿ ಕೊಳಕುಮಂಡಲ ಹಾವಿನ ನರಳಾಟ! 

ಸೋಮವಾರ ಸಿದ್ದರಾಮಪ್ಪ ಸಹೋದರಿ ಸಾವಿನ ಸುದ್ದಿ ತಿಳಿದು ತಾಲೂಕಿನ ಕುಮಿಸಿ ಗ್ರಾಮಕ್ಕೆ ಸಿದ್ದರಾಮಪ್ಪ ಕುಟುಂಬ ಮತ್ತು ಸರೋಜಾ ಕುಟುಂಬ ಸದಸ್ಯರು ತೆರಳಿದ್ದರು, ಬಳಿಕ, ವಾಪಾಸ್ ಬರುವಾಗ ಸರೋಜ, ಸಿದ್ದರಾಮಪ್ಪ ರನ್ನು ಕ್ರೂಸರ್ ಗಾಡಿಯಲ್ಲಿ ಕೂರುವಂತೆ ಹೇಳಿದ್ದರು, ವಯಸ್ಸಾದವನಿಗೆ ಕ್ರೂಸರ್ ಗಾಡಿಯಲ್ಲಿ ಕೂರುವಂತೆ ಹೇಳಿದ್ದಕ್ಕೆ ಸಿದ್ದರಾಮಪ್ಪ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.

ಸಿದ್ದರಾಮಪ್ಪ ಬೈದಿರುವ ಸುದ್ದಿಯನ್ನು ಸರೋಜ, ತನ್ನ ಮಗ ಆಕಾಶ್​ ಕಾಮನ್​ ನಿಗೆ ತಿಳಿಸಿದ್ದಾರೆ, ವಿಚಾರ ತಿಳಿದು ರೊಚ್ಚಿಗೆದ್ದ ಆಕಾಶ್​ ಚಾಕುವಿನಿಂದ ತನ್ನ ಅಜ್ಜ ಸಿದ್ದರಾಮಪ್ಪ ಕಾಮನ್ ನನ್ನು ಇರಿದು ಕೊಂದಿದ್ದಾನೆ.

ಸದ್ಯ ಈ ಪ್ರಕರಣವು ನರೋಣಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪರಿಶೀಲನೆ ನಡೆಸಿದ್ದಾರೆ.

Exit mobile version