Site icon PowerTV

ಅಂಬಿಕಾಪತಿ ಸಾವಿಗೆ ಬಿಜೆಪಿ ಸರ್ಕಾರದ ಶಾಸಕರೇ ಕಾರಣ!

ಬೆಂಗಳೂರು: ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಹೃದಯಾಘಾತದಿಂದ ಸಾವನಪ್ಪಿದ್ದು, ಈ ಸಾವಿಗೆ ಬಿಜೆಪಿ ಶಾಸಕರೇ ಕಾರಣ ಎಂದು ಅವರು ಆರೋಪಿಸಿದರು.

ಈ ಕುರಿತು ಬೆಂಗಳೂರಿನಲ್ಲಿ ಮಾದ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಬಿಎಂಪಿ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಸಾವಿಗೆ ಹಿಂದಿನ ಬಿಜೆಪಿ ಸರ್ಕಾರದ ಶಾಸಕರು ಹಾಗೂ ಸರ್ಕಾರದ ಅಧಿಕಾರಿಗಳೇ ಕಾರಣ, ಮಾನಸಿಕ ಟಾರ್ಚರ್‌ನಿಂದ ಅಂಬಿಕಾಪತಿ ಅವರಿಗೆ ನೋವಾಗಿತ್ತು. ಇತ್ತೀಚೆಗೆ ಆದ ಕೆಲ ಘಟನೆಗಳಿಂದ ಬಹಳ ನೊಂದಿದ್ದರು ಎಂದರು.

ಇದನ್ನೂ ಓದಿ: 40% ಕಮಿಷನ್​ ಕುರಿತು ನ್ಯಾಯಮೂರ್ತಿಗಳಿಗೆ ದಾಖಲೆ ಸಲ್ಲಿಸಿದ ಕೆಂಪಣ್ಣ!

ಕಳೆದ ಸರ್ಕಾರದ ಸಚಿವರೊಬ್ಬರು ಹಾಗೂ ಈಗಿನ ಸರ್ಕಾರದ ಕೆಲ ಅಧಿಕಾರಿಗಳು ಇವರ ಸಾವಿಗೆ ಕಾರಣ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್​ ಸಿಡಿಸಿದ್ದಾರೆ.

Exit mobile version