Site icon PowerTV

ನಗರದಲ್ಲಿ ಇಂದು ಸಾಲು-ಸಾಲು ಪ್ರೊಟೆಸ್ಟ್​​: ಪ್ರಮುಖ ರಸ್ತೆಗಳ ಮಾರ್ಗ ಬದಲಾವಣೆ

ಬೆಂಗಳೂರಿನಲ್ಲಿ ಇಂದು ಸಾಲು ಸಾಲು ಪ್ರತಿಭಟನೆ ಹಾಗೂ ಹೋರಾಟಗಳು ನಡೆಯಲಿದ್ದು ಸಂಯುಕ್ತ ಹೋರಾಟ ಸಮಿತಿ ಸೇರಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ಹಾಗೂ ರಾಜಭವನ ಚಲೋ ನಡೆಯಲಿವೆ. ಈ ಹಿನ್ನೆಲೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಹೆಚ್ಚಾಗಲಿದೆ.

ಬೆಂಗಳೂರಿನ ವಿವಿಧ ಮಾರ್ಗಗಳಲ್ಲಿ ವಾಹನ ಸಂಚಾರ ದಟ್ಟಣೆಯಾಗುವುದು ಖಚಿತ, ಹೀಗಾಗಿ ವಾಹನ ಸವಾರರು ಈ ಕೆಳಗೆ ತಿಳಿಸಿರುವ ಮಾರ್ಗಗಳನ್ನು ಹೊರತುಪಡಿಸಿ ಬೇರೆ ಮಾರ್ಗದಲ್ಲಿ ಸಂಚರಿಸುವುದು ಒಳಿತು. ಬೆಂಗಳೂರಿನಲ್ಲಿ ರಸ್ತೆಗಿಳಿಯುವ ಮುನ್ನ ಇವತ್ತು ವಾಹನ ಸವಾರರೇ ಹುಷಾರ್‌ ಆಗಿ ಇರಬೇಕಿದೆ.ಇದಕ್ಕೆ ಕಾರಣವೇ ಪ್ರತಿಭಟನೆ.

ಇದನ್ನೂ ಓದಿ: ಸೈನಿಕರನ್ನು ಬಲಿ ಪಡೆದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತೆ: ಶಾಸಕ ಬಾಲಕೃಷ್ಣ

ಸಂಯುಕ್ತ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಇವತ್ತು ರಸ್ತೆಗೆ ಇಳಿಯುತ್ತಿವೆ. ಫ್ರೀಡಂಪಾರ್ಕ್‌ನಿಂದ ಹೋರಾಟ ಆರಂಭಿಸಿ ರಾಜಭವನ ಚಲೋ ಹಮ್ಮಿಕೊಂಡಿವೆ. ಇದರಿಂದ ಬೆಂಗಳೂರಿನಲ್ಲಿ ಟ್ರಾಫಿಕ್‌ಜಾಮ್‌ನ ಆತಂಕ ಇದ್ದು, ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಕೋಡೆ ಸರ್ಕಲ್‌ನಿಂದ ಕೆಆರ್‌ ಸರ್ಕಲ್‌ಗೆ ಹೋಗುವ ರಸ್ತೆಯಲ್ಲಿ ವಾಹನ ಓಡಾಟಕ್ಕೆ ಬ್ರೇಕ್‌ ಬೀಳಲಿದ್ದು, ಪರ್ಯಾಯ ಮಾರ್ಗ ಬಳಸುವಂತೆ ಸಾರಿಗೆ ಪೊಲೀಸರು ಮನವಿ ಮಾಡಿದ್ದಾರೆ. ಜತೆಗೆ ಕೋಡೆ ಜಂಕ್ಷನ್, ಮಹಾರಾಣಿ ಜಂಕ್ಷನ್, ಪ್ಯಾಲೆಸ್ ರಸ್ತೆ, ಕೆ.ಜಿ.ರಸ್ತೆಗಳಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಇದೆ.

Exit mobile version