Site icon PowerTV

ನೆನಪಿಡಿ.. ಡಿಸೆಂಬರ್ ತಿಂಗಳಿನಲ್ಲಿ 18 ದಿನ ಬ್ಯಾಂಕ್​ಗಳಿಗೆ ರಜೆ

ಬೆಂಗಳೂರು : ನವೆಂಬರ್ ತಿಂಗಳು ಮುಗಿಯುತ್ತಾ ಬಂದಿದ್ದು, ಆಲ್​ ಮೋಸ್ಟ್ ಪ್ರಮುಖ ಹಬ್ಬ-ಹರಿದಿನಗಳೆಲ್ಲವೂ ಮುಗಿದಿದೆ. ಇನ್ನೂ, ಡಿಸೆಂಬರ್ ತಿಂಗಳು ಆರಂಭವಾಗುವ ಸಮಯ ಬಂದಿದ್ದು, ಮುಂದಿನ ತಿಂಗಳಲ್ಲಿ ಬ್ಯಾಂಕ್ ಗಳಿಗೆ ಸಿಕ್ಕಾಪಟ್ಟೆ ರಜೆಗಳಿವೆ.

ಆರ್.ಬಿ.ಐ ಕ್ಯಾಲೆಂಡರ್ ಪ್ರಕಾರ ರಾಜ್ಯದಲ್ಲಿ ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ಸೇರಿದಂತೆ ಬರೋಬ್ಬರಿ 18 ದಿನ ರಜೆ ಸಿಗುತ್ತದೆ. 31 ದಿನಗಳಲ್ಲಿ 18 ರಜೆ ಕಳೆದರೆ, 13 ದಿನ ಮಾತ್ರ ಬ್ಯಾಂಕ್ ಕೆಲಸಗಳು ನಡೆಯಲಿವೆ. ಬ್ಯಾಂಕ್​ಗಳು ಮುಚ್ಚಿದ್ದರೂ ಆನ್​ಲೈನ್​ ಸೇವೆಗಳು ಕಾರ್ಯನಿರ್ವಹಿಸುತ್ತಲೇ ಇರುತ್ತವೆ.

ಈ ಕುರಿತು ಆರ್​ಬಿಐ ಮಾಹಿತಿ ನೀಡಿದ್ದು, ಡಿಸೆಂಬರ್​ನಲ್ಲಿ 18 ದಿನಗಳ ಕಾಳ ಬ್ಯಾಂಕ್​ಗಳು ಮುಚ್ಚಲ್ಪಡುತ್ತವೆ. ಇದರಲ್ಲಿ 2ನೇ, 4ನೇ ಶನಿವಾರ ಹಾಗೂ ಭಾನುವಾರದ ರಜೆಗಳು ಸೇರಿವೆ ಎಂದಿದೆ. ಇನ್ನೂ ಡಿಸೆಂಬರ್ 4ರಿಂದ 11ರವರೆಗೆ ರಾಜ್ಯವಾರು ಹಾಗೂ ಬ್ಯಾಂಕ್​ವಾರು 6 ದಿನಗಳ ಕಾಲ ಮುಷ್ಕರ ನಡೆಸುವುದಾಗಿ ಅಖಿಲ ಭಾರತೀಯ ಬ್ಯಾಂಕ್ ನೌಕರರ ಸಂಘ ಪ್ರಕಟಿಸಿದೆ.

ಹೀಗಿದೆ ರಜೆಗಳ ದಿನಾಂಕ

Exit mobile version