Site icon PowerTV

ಸೋಮಣ್ಣ ಬಿಜೆಪಿಗೆ ಹೋಗಿದ್ದೇ ವಿಸ್ಮಯ : ಡಿ.ಕೆ. ಶಿವಕುಮಾರ್

ನವದೆಹಲಿ : ಮಾಜಿ ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರುವ ವಿಚಾರ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣ ಅವರು ನನ್ನ ಹತ್ತಿರ ಇದುವರೆಗೆ ಏನು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮಣ್ಣ ಅವರು ನಮ್ಮ ತಾಲೂಕಿನವರು, ಹಿರಿಯ ನಾಯಕರಾಗಿದ್ದಾರೆ. ಅವರ ನೋವು, ದುಃಖ ದುಮ್ಮಾನ ಎಲ್ಲವನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಚುನಾವಣೆಲಿ ನಿಂತು ಸೋತರು, ನಮ್ಮ ಪಕ್ಷದಿಂದಲೂ ಅವರ ಪಾರ್ಟಿಲೂ ನಿಂತು ಸೋತರು. ಅವರು ಯಾಕೆ ಅಲ್ಲಿ ಹೋದ್ರು ಅನ್ನೋದು ವಿಸ್ಮಯ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

ತಮ್ಮ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಕ್ಯಾಬಿನೆಟ್ ನಲ್ಲಿ ವಾಪಸ್ ವಿಚಾರವಾಗಿ ಮಾತನಾಡಿ, ನಾನು ಎಲ್ಲರ ಮನಸ್ಥಿತಿ ಅರ್ಥ ಮಾಡಿಕೊಂಡಿದ್ದೇನೆ. ಇನ್ನೂ ಟೈಮ್ ಇದೆಯಲ್ಲ, ಮಾತನಾಡೋಣ. ಸಿಬಿಐ ವಿಚಾರ ಮಾತನಾಡ್ತೀನಿ, ಮಾತನಾಡದೇ ಇರೋಲ್ಲ. ಎಲ್ಲರ ಮನಸ್ಥಿತಿ ಈಗ ಅರ್ಥ ಆಗ್ತಿದೆ. ಯಾರ ಯಾರ ಮನಸ್ಸು, ಹೃದಯದಲ್ಲಿ ಏನಿದೆ ಅನ್ನೋದು ಅರ್ಥ ಆಗ್ತಿದೆ ಎಂದು ವಿಪಕ್ಷ ನಾಯಕರಿಗೆ ಚಾಟಿ ಬೀಸಿದ್ದಾರೆ.

ಹೊಟ್ಟೆ ಉರಿಯಲಿ, ಜೋರಾಗಿ ಉರಿಯಲಿ

ಜನತಾ ದರ್ಶನದ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೊಸದಾಗಿ ವಿಪಕ್ಷ ನಾಯಕ ಆಗಿದ್ದಾರೆ. ಹೊಟ್ಟೆ ಉರಿಯಲಿ, ಜೋರಾಗಿ ಉರಿಯಲಿ ಎಂದು ಡಿ.ಕೆ. ಶಿವಕುಮಾರ್ ಕುಟುಕಿದ್ದಾರೆ.

Exit mobile version