Site icon PowerTV

ಕುಡಿಯಲು ಹಣ ಕೊಡದ್ದಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಂದ ಪಾಪಿ ಗಂಡ 

ರಾಯಚೂರು: ಕುಡಿಯುದಕ್ಕೆ ಹಣ ಕೊಡಲಿಲ್ಲವೆಂದು ಪತ್ನಿಯನ್ನೇ ಹೊಡೆದು ಕೊಂದಿರುವ ಘಟನೆ ನೆಡೆದಿದೆ. 

ಸುನೀತಾ (28)ಹತ್ಯೆಯಾದ ಮಹಿಳೆ, ಪತಿ ಬಸವರಾಜ್ ಕೊಲೆಗೈದ ಆರೋಪಿಯಾಗಿದ್ದು, ನಗರದ ಲಿಂಗಸಗೂರು ತಾಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ಈ ದುರ್ಘಟನೆ ನೆಡೆದಿದೆ.

2015ರಲ್ಲಿ ಪರಸ್ಪರ ಪ್ರೀತಿಸಿ ಲಿಂಗಸಗೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದ ದಂಪತಿ. ಪ್ರೀತಿಸಿ ಮದುವೆಯಾಗಿದ್ದ ದಂಪತಿಗಳು, ಮದುವೆಯಾಗಿ‌ ಕೆಲ ದಿನಗಳ ಕಾಲ ಮಾತ್ರ ಸುಖಸಂಸಾರವನ್ನು ದಂಪತಿಗಳು ನಡೆಸಿದ್ದಾರೆ.

ಇದನ್ನೂ ಓದಿ: ವಿ.ಸೋಮಣ್ಣ ಬಿಜೆಪಿಯಲ್ಲಿ ಬಲಿಪಶು: ಸಚಿವ ಎಂ.ಬಿ.ಪಾಟೀಲ್

ಕುಡಿತದ ಚಟಕ್ಕೆ ದಾಸನಾಗಿದ್ದ ಆರೋಪಿ ಬಸವರಾಜ್, ಕುಡಿದು ಬಂದು ದಿನನಿತ್ಯ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ. ಕುಡಿಯುವುದಕ್ಕೆ ಹಣ ನೀಡುವಂತೆ ಪೀಡಿಸುತ್ತಿದ್ದ ಪತಿರಾಯ. ಎಷ್ಟು ದಿನಾಂತ ಕೊಟ್ಟಾಳು? ಕೂಲಿ ಮಾಡಿ ಕೂಡಿಟ್ಟ ಹಣವೆಲ್ಲ ಗಂಡ ಬಸವರಾಜನ ಕುಡಿತಕ್ಕೆ ಹೋಗುತ್ತಿದ್ದರಿಂದ ಸಂಸಾರ ನಡೆಸುವುದೇ ಕಷ್ಟವಾಗಿದೆ.

ಘಟನೆಯ ವಿವರ 

ನಿನ್ನೆ ಸಂಜೆಯೂ ಸಹ ಜಮೀನಿನಲ್ಲಿ ಬೆಳೆಗೆ ನೀರು ಕಟ್ಟುವಾಗ ಇಬ್ಬರ ನಡುವೆ ಗಲಾಟೆಯಾಗಿದೆ. ಜಮೀನಿನಲ್ಲಿ ಕುಡಿಯುವುದಕ್ಕೆ ಹಣ ಕೊಡುವಂತೆ ಪತ್ನಿಯೊಂದಿಗೆ ಜಗಳಕ್ಕಿಳಿದಿರುವ ಪತಿ. ಈ ವೇಳೆ ಹಣ ಕೊಡಲು ಒಪ್ಪದ್ದಕ್ಕೆ ಇಬ್ಬರ ನಡುವೆ ಜಮೀನಿನಲ್ಲಿ ಜಗಳವಾಗಿದೆ ಈ ವೇಳೆ ಕೋಪಗೊಂಡು ಪತ್ನಿಯನ್ನ ಹತ್ಯೆ  ಮಾಡಿದ್ದಾನೆ. ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Exit mobile version