Site icon PowerTV

ಜಾತಿ‌ ಹೆಸರಿನಲ್ಲಿ ಸಮಾಜ ಛದ್ರವಾಗುತ್ತಿದೆ : ಜನಾರ್ದನ ರೆಡ್ಡಿ

ಬೆಂಗಳೂರು: ಜಾತಿ‌ ಹೆಸರಿನಲ್ಲಿ ಸಮಾಜ ಛದ್ರವಾಗುತ್ತಿದೆ ಇದಕೆಲ್ಲಾ ಕಡಿವಾಣ ಹಾಕುವುದೇ ನಮ್ಮ ಪಕ್ಷದ ಗುರಿ ಎಂದು ಜನಾರ್ದನ್​ ರೆಡ್ಡಿ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು ನಮ್ಮ ಪಕ್ಷದ ಗುರಿ ಬಲಹೀನರನ್ನ ಮೇಲಕ್ಕೆ ತರುವ ಕೆಲಸ ಮಾಡಬೇಕಿದೆ. ನಾವು 40, 50 ಜಾತಿಗಳನ್ನು ಗುರ್ತಿಸಬಹುದು ಆದರೆ ಗಮನಕ್ಕೆ ಬಾರದ ನೂರಾರು ಜಾತಿಗಳಿವೆ ಇವುಗಳನ್ನು ಯಾರೂ ಗುರ್ತಿಸುತ್ತಿಲ್ಲ ಎಂದು ಅವೈಜ್ಙಾನಿಕ ಗಣತಿ ಮಾಡಿ ದ್ವೇಷ ಮೂಡಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ: ಶಬರಿಮಲೆ : ಸ್ವಾಮಿ ಅಯ್ಯಪ್ಪ ಭಕ್ತರಿಗೆ ಹೊಸ ಮಾರ್ಗಸೂಚಿ ಪ್ರಕಟ

ಜಾತಿ, ಧರ್ಮ ವಿಚಾರದಲ್ಲಿ ದ್ವೇಷ ಬೇಡ ಮಾಡಬಾರದು ಎಂದು ಹೇಳಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಇದರ ಕುರಿತು ಅನೇಕ ಗೊಂದಲಗಳು ಇವೆ.ಕೇವಲ ಜಾತಿಗಾಗಿ ರಾಜಕೀಯ ಮಾಡ ಬಾರದು ಇದರಿಂದ ಸಮಾಜ ಪರಿಸ್ಥಿತಿ ಹದಗೆಟ್ಟುವಂತಹ ಪರಿಸ್ಥಿತಿ ಸೃಷ್ಷಿಯಾಗಬಾರದು ಎಂದು ಗುಡಿಗಿದರು.

 

 

Exit mobile version