Site icon PowerTV

ಈ ಸರ್ಕಾರ ನಡೆಸುತ್ತಿರುವುದು ಸಿದ್ದರಾಮಯ್ಯ ಅಲ್ಲ, ಡಿ.ಕೆ. ಶಿವಕುಮಾರ್ : ಮುರುಗೇಶ್ ನಿರಾಣಿ

ಬಾಗಲಕೋಟೆ : ಡಿಸಿಎಂ ಡಿ.ಕೆ. ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣ ವಿಥ್ ಡ್ರಾ ಮಾಡಿರುವ ವಿಚಾರದ ಬಗ್ಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ರಾಜಕಾರಣದಲ್ಲಿ ಹಿರಿಯರು. ಅವರು ಸಾಕಷ್ಟು ಏಳು ಬೀಳು ನೋಡಿದ್ದಾರೆ ಎಂದು ಹೇಳಿದ್ದಾರೆ.

ಡಿಕೆಶಿ ಅವ್ರು ಪ್ರಕರಣ ತನಿಖೆ ಹಂತದಲ್ಲಿದ್ದಾಗ ತನಿಖೆಯಲ್ಲಿ ಸೋಲಾಗುವ ಹೆದರಿಕೆಯಿಂದ ಕ್ಯಾಬಿನೆಟ್ ನಲ್ಲಿ ವಿಥ್ ಡ್ರಾ ಮಾಡಿದ್ದು ಶೋಭೆ ತರುವಂತದ್ದಲ್ಲ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಘನತೆ ಗೌರವ ಇತ್ತು. ಆದ್ರೆ, ಡಿಕೆಶಿ ಪ್ರಕರಣ ವಿತ್ ಡ್ರಾ ಮಾಡಿದ್ದು ನೋಡಿದ್ರೆ, ಈ ಸರ್ಕಾರ ನಡೆಸ್ತಿರೋದು ಸಿದ್ದರಾಮಯ್ಯ ಅಲ್ಲ, ಡಿ.ಕೆ. ಶಿವಕುಮಾರ್ ಎಂದು ಕುಟುಕಿದ್ದಾರೆ.

ಡಿಕೆಶಿ ಅವ್ರು ಕ್ಲೀನ್ ಆಗಿದ್ರೆ..!

ರಾಜಕೀಯ ಪ್ರೇರಿತವಾಗಿ ಕೇಸ್ ಹಾಕಲಾಗಿತ್ತು ಎಂಬ ಕಾಂಗ್ರೆಸ್​ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಅವ್ರು ಕ್ಲೀನ್ ಆಗಿದ್ದರೇ ಅವರದ್ದೇ ಸರ್ಕಾರ ಇದೆ, ತನಿಖೆ ಮಾಡಲು ಬಿಡಬೇಕು. ಅಧಿಕಾರಿಗಳು ಯಾವುದೇ ಸರ್ಕಾರಕ್ಕೆ ಸೀಮಿತವಾಗಿರಲ್ಲ. ಸಿದ್ದರಾಮಯ್ಯನವರು ಮಾಡಿರೋದು ತಪ್ಪಿದೆ. ಇದನ್ನ ವಿರೋಧಿಸಿ ಬಿಜೆಪಿ ಈಗಾಗಲೇ ಪ್ರತಿಭಟನೆ ನಡೆಸಿದೆ. ಲೀಗಲ್ ವಿಭಾಗದ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

Exit mobile version